ಪಿಎಂ ಕೇರ್ಸ್ ಫಂಡ್‌ನಿಂದ ದೆಹಲಿಯಲ್ಲಿ 8 ಆಕ್ಸಿಜನ್ ಘಟಕ ಸ್ಥಾಪನೆ: ಸರ್ಕಾರದ ಮೂಲಗಳು

ಕೇಂದ್ರ ಸರ್ಕಾರ ದೇಶದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಪಿಎಂ ಕೇರ್ಸ್ ನಿಧಿಯಿಂದ ದೆಹಲಿಯಲ್ಲಿ ಎಂಟು...
ಆಕ್ಸಿಜನ್
ಆಕ್ಸಿಜನ್

ನವದೆಹಲಿ: ಕೇಂದ್ರ ಸರ್ಕಾರ ದೇಶದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಪಿಎಂ ಕೇರ್ಸ್ ನಿಧಿಯಿಂದ ದೆಹಲಿಯಲ್ಲಿ ಎಂಟು ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಘಟಕಗಳು ವೈದ್ಯಕೀಯ ಆಮ್ಲಜನಕದ ಸಾಮರ್ಥ್ಯವನ್ನು 14.4 ಮೆಟ್ರಿಕ್ ಟನ್ ಗೆ ಹೆಚ್ಚಿಸಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ಭಾನುವಾರ ತಿಳಿಸಿವೆ.

ಮಾರ್ಚ್ 17 ರಂದು ಬುರಾರಿ ಆಸ್ಪತ್ರೆಯಲ್ಲಿ ಒಂದು ಘಟಕವನ್ನು ಸ್ಥಾಪಿಸಲಾಗಿದ್ದು, ಇತರ ನಾಲ್ಕು, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಲೋಕ ನಾಯಕ್ ಆಸ್ಪತ್ರೆ, ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ರೋಹಿಣಿ ಮತ್ತು ಅಶೋಕ್ ವಿಹಾರ್‌ನ ದೀಪಾ ಚಂದ್ ಬಂಧು ಆಸ್ಪತ್ರೆಯಲ್ಲಿ ತಲಾ ಒಂದು ಘಟಕ ಏಪ್ರಿಲ್ 30 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಆಕ್ಸಿಜನ್ ಉತ್ಪಾದನಾ ಘಟಕ ವಿಚಾರದಲ್ಲಿ ದೆಹಲಿ ಸರ್ಕಾರವೇ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ದಕ್ಷಿಣಪುರಿಯ ಅಂಬೇಡ್ಕರ್ ನಗರ ಆಸ್ಪತ್ರೆಯ ಘಟಕಕ್ಕಾಗಿ ದೆಹಲಿ ಸರ್ಕಾರವು ಏಪ್ರಿಲ್ 19 ರ ಹೊತ್ತಿಗೆ ಈ ಸ್ಥಳವನ್ನು ಸಿದ್ಧಪಡಿಸಿದೆ ಎಂದಿದ್ದಾರೆ.

ದೆಹಲಿಯ ಎರಡು ಆಸ್ಪತ್ರೆಗಳಾದ ಸತ್ಯವತಿ ರಾಜಾ ಹರಿಶ್ಚಂದ್ರ ಆಸ್ಪತ್ರೆ ಮತ್ತು ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಪಿಎಸ್ಎ ಘಟಕ ಸ್ಥಾಪಿಸಲು ದೆಹಲಿ ಸರ್ಕಾರ ಜಾಗವನ್ನೇ ನೀಡಿಲ್ಲ ಎಂದು ಅವರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com