ಮುಂಬೈ ಪೊಲೀಸ್ ಆಯುಕ್ತರ ಸಾಂದರ್ಭಿಕ ಚಿತ್ರ
ಮುಂಬೈ ಪೊಲೀಸ್ ಆಯುಕ್ತರ ಸಾಂದರ್ಭಿಕ ಚಿತ್ರ

ಡಬಲ್ ಮಾಸ್ಕ್, ಫೇಸ್ ಶೀಲ್ಡ್ ಬಳಸಲು ಮುಂಬೈ ಪೊಲೀಸ್ ಆಯುಕ್ತರ ಸೂಚನೆ

ಕಾರ್ಯಕ್ಷೇತ್ರದಲ್ಲಿರುವ ಪೊಲೀಸ್ ಸಿಬ್ಬಂದಿ ಡಬಲ್ ಮಾಸ್ಕ್ ಮತ್ತು ಫೇಸ್ ಶೀಲ್ಡ್  ಬಳಸುವಂತೆ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೇಲ್ ಸೂಚಿಸಿರುವುದಾಗಿ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಮುಂಬೈ: ಕಾರ್ಯಕ್ಷೇತ್ರದಲ್ಲಿರುವ ಪೊಲೀಸ್ ಸಿಬ್ಬಂದಿ ಡಬಲ್ ಮಾಸ್ಕ್ ಮತ್ತು ಫೇಸ್ ಶೀಲ್ಡ್  ಬಳಸುವಂತೆ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೇಲ್ ಸೂಚಿಸಿರುವುದಾಗಿ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಕೋವಿಡ್-19 ನಡುವೆ ಜನರ ಅನಗತ್ಯ ಓಡಾಟವನ್ನು ತಡೆಯಲು ನಗರದಾದ್ಯಂತ ಪೊಲೀಸ್ ಚೆಕ್ ಪಾಯಿಂಟ್ ಗಳನ್ನು ತೆರೆದ ಬೆನ್ನಲ್ಲೆ ನಗರ ಪೊಲೀಸ್ ಆಯುಕ್ತರು ಈ ರೀತಿಯ ಸೂಚನೆ ನೀಡಿದ್ದಾರೆ ಎಂದು ಡಿಸಿಪಿ ಎಸ್. ಚೈತನ್ಯ ತಿಳಿಸಿದ್ದಾರೆ.

ನಗರದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ಒಳಗೊಂಡಂತೆ ಅನೇಕ ಕಡೆಗಳಲ್ಲಿ ಜನ ಹಾಗೂ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.ಕೋವಿಡ್-19 ಸೋಂಕು ಹರಡದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ, ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಡಬಲ್ ಮಾಸ್ಕ್, ಫೇಸ್ ಶೀಲ್ಡ್ ಬಳಸಲು ನಗರ ಪೊಲೀಸ್ 
ಆಯುಕ್ತರು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

ಕೋವಿಡ್-19 ಎರಡನೇ ಅಲೆಯಲ್ಲಿ ಈವರೆಗೂ ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿನ ಆರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com