ಈ ವರೆಗೆ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆ: ಆರೋಗ್ಯ ಸಚಿವಾಲಯ

ದೇಶಾದ್ಯಂತ ಈ ವರೆಗೂ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. 

Published: 29th April 2021 03:05 PM  |   Last Updated: 29th April 2021 03:22 PM   |  A+A-


vaccination

ಲಸಿಕೆ ಅಭಿಯಾನ

Posted By : Srinivas Rao BV
Source : IANS

ನವದೆಹಲಿ: ದೇಶಾದ್ಯಂತ ಈ ವರೆಗೂ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. 

ಏ.29 ರಂದು ಬೆಳಿಗ್ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 22,07,065  ಸೆಷನ್ ಗಳಲ್ಲಿ 15,00,20,648 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. 

ಈ ಪೈಕಿ 93,67,520 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಗಳನ್ನು ಪಡೆದಿದ್ದರೆ 61,47,918  ಮಂದಿ ಆರೋಗ್ಯ ಕಾರ್ಯಕರ್ತರು ಎರಡೂ ಡೋಸ್ ಗಳನ್ನು ಪಡೆದಿದ್ದಾರೆ. 1,23,19,903 ಮುನ್ನೆಲೆ ಕಾರ್ಯಕರ್ತರು ಮೊದಲ ಡೋಸ್ ನ್ನು ಪಡೆದಿದ್ದರೆ, 66,12,789 ಮಂದಿ ಎರಡನೇ ಡೋಸ್ ನ್ನು ಪಡೆದಿದ್ದಾರೆ. 

60 ವರ್ಷದ ಮೇಲ್ಪಟ್ಟ 5,14,99,834 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ, ಎರಡೂ ಡೋಸ್ ಗಳನ್ನು ಇದೇ ವಿಭಾಗದ 98,92,380 ಮಂದಿ ಸ್ವೀಕರಿಸಿದ್ದಾರೆ. 45-60 ವರ್ಷದವರೆಗಿನ 5,10,24,886 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ ಎರಡೂ ಡೋಸ್ ಗಳನ್ನು 31,55,418 ಮಂದಿಗೆ ನೀಡಲಾಗಿದೆ. 

10 ರಾಜ್ಯಗಳಿಂದ ನಡೆದಿರುವ ಲಸಿಕೆ ಅಭಿಯಾನ ದೇಶದ ಶೇ.67.18 ರಷ್ಟು ಲಸಿಕೆ ಅಭಿಯಾನದ ಪಾಲನ್ನು ಹೊಂದಿದ್ದು,  ಕಳೆದ 24 ಗಂಟೆಗಳಲ್ಲಿ 21 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು ನೀಡಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಎರಡು ಅವಧಿಗೆ ವಿಭಜಿಸುವ ಸಿಬಿಎಸ್ ಇ ಕ್ರಮ ಉತ್ತಮವೇ?


Result
ಸರಿ
ತಪ್ಪು
flipboard facebook twitter whatsapp