ಇದೇ ಮೊದಲು, ತೆಲಂಗಾಣದಲ್ಲಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸಲು ಕೇಂದ್ರ ಸಮ್ಮತಿ

ಇದೇ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಸಚಿವಾಲಯ, ತೆಲಂಗಾಣದಲ್ಲಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸುವುದಕ್ಕೆ ಅನುಮತಿ ನೀಡಿದೆ. 
ಕೋವಿಡ್-19 ಲಸಿಕೆ (ಸಂಗ್ರಹ ಚಿತ್ರ)
ಕೋವಿಡ್-19 ಲಸಿಕೆ (ಸಂಗ್ರಹ ಚಿತ್ರ)

ಹೈದರಾಬಾದ್: ಇದೇ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಸಚಿವಾಲಯ, ತೆಲಂಗಾಣದಲ್ಲಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸುವುದಕ್ಕೆ ಅನುಮತಿ ನೀಡಿದೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಡ್ರೋಣ್ ಮೂಲಕ ಲಸಿಕೆ ತಲುಪಿಸುವ ವ್ಯವಸ್ಥೆಗೆ ಅನುಮತಿ ಕೋರಿದೆ. 

ಅನುಮತಿ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಸಚಿವಾಲಯ "ಮಾನವರಹಿತ ವಿಮಾನ ವ್ಯವಸ್ಥೆ ನಿಯಮ 2021 ರ ಅನ್ವಯ, ತೆಲಂಗಾಣ ಸರ್ಕಾರಕ್ಕೆ ಪ್ರಾಯೋಗಿಕವಾಗಿ ವಿಎಲ್ಒಎಸ್ ನ ವ್ಯಾಪ್ತಿಯಲ್ಲಿ ಡ್ರೋಣ್ ಮೂಲಕ ಲಸಿಕೆ ತಲುಪಿಸುವುದಕ್ಕೆ ಅನುಮತಿ ನೀಡಲಾಗಿದೆ" ಎಂದು ಹೇಳಿದೆ. 

45 ವಯಸ್ಸಿನ 1 ಕೋಟಿ ಮಂದಿಗೆ ಮಾ.09 ರಂದು ಡ್ರೋಣ್ ಮೂಲಕ ಲಸಿಕೆ ತಲುಪಿಸುವುದಕ್ಕೆ ಸಚಿವಾಲಯದಿಂದ ಯುಎಎಸ್ ನಿಯಮಗಳ ಸಡಿಲಿಕೆಗೆ ತೆಲಂಗಾಣ ಸರ್ಕಾರ ಮನವಿ ಮಾಡಿತ್ತು. ಒಂದು ವರ್ಷಗಳ ಕಾಲ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ವಿಷ್ಯುಯಲ್ ರೇಂಜ್ ನಲ್ಲಿ ಬಳಕೆ ಮಾಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com