
ಕುಸ್ತಿಪಟು ಸುಶೀಲ್ ಕುಮಾರ್
ನವದೆಹಲಿ: ಒಲಂಪಿಕ್ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್ ಸೇರಿ 19 ಮಂದಿ ವಿರುದ್ಧ ದೆಹಲಿ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ಕಿರಿಯ ರಾಷ್ಟ್ರಿಯ ಕುಸ್ತಿ ಚಾಂಪಿಯನ್ ನ್ನು ಛತ್ರಸಾಲ್ ಸ್ಟೇಡಿಯಂ ನಲ್ಲಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಚಾರ್ಜ್ ಶೀಟ್ ದಾಖಲಾಗಿದ್ದು, ಸುಶೀಲ್ ಕುಮಾರ್ ಪ್ರಮುಖ ಆರೋಪಿಯಾಗಿದ್ದಾರೆ.
ಅಂತಿಮ ವರದಿಯಲ್ಲಿ ಸುಶೀಲ್ ಕುಮಾರ್ ಹೆಸರಿದ್ದು, ಸಿಎಂಎಂ ಸತ್ವೀರ್ ಸಿಂಗ್ ಲಾಂಬ ಅವರಿಗೆ ಸಲ್ಲಿಸಲಾಗಿದೆ. ಈ ವರೆಗೂ ಪ್ರಕರಣದಲ್ಲಿ 15 ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೂ 5 ಮಂದಿಯ ಬಂಧನವಾಗಬೇಕಿದೆ.
23 ವರ್ಷದ ಕುಸ್ತಿಪಟು ಸಾಗರ್ ಧನ್ಕರ್ ಹಾಗೂ ಆತನ ಸ್ನೇಹಿತರಾದ ಸೋನು ಹಾಗೂ ಅಮಿತ್ ಕುಮಾರ್ ಮೇಲೆ ಮೇ.4-5 ರಂದು ಸುಶೀಲ್ ಕುಮಾರ್ ಹಾಗೂ ಸಹಚರರು ಹಲ್ಲೆ ನಡೆಸಿದ್ದರು ತತ್ಪರಿಣಾಮ ಸಾಗರ್ ಧನ್ಕರ್ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಾಕ್ಷ್ಯದಲ್ಲಿ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದು ಸ್ಪಷ್ಟವಾಗಿತ್ತು.