ಜಿಕಾ ವೈರಸ್ ವರದಿಯಾದ ಪುಣೆಗೆ ಕೇಂದ್ರ ತಂಡ ಭೇಟಿ ಸಾಧ್ಯತೆ

ಇತ್ತೀಚಿಗೆ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದ್ದ ಮಹಾರಾಷ್ಟ್ರದ ಪುಣೆಗೆ  ದೆಹಲಿಯಿಂದ ತಜ್ಞರ ತಂಡವೊಂದು ಭೇಟಿ ನೀಡುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಇತ್ತೀಚಿಗೆ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದ್ದ ಮಹಾರಾಷ್ಟ್ರದ ಪುಣೆಗೆ  ದೆಹಲಿಯಿಂದ ತಜ್ಞರ ತಂಡವೊಂದು ಭೇಟಿ ನೀಡುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಪುರಂದರ್ ತೆಹಸಿಲ್ ನ ಬೆಲ್ಸಾರ್ ಗ್ರಾಮದ 50 ವರ್ಷದಮ ಮಹಿಳೆಯೊಬ್ಬರು ಕಳೆದ ಶುಕ್ರವಾರ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಆ ಮಹಿಳೆ ಇದೀಗ ಸಂಪೂರ್ಣವಾಗಿ ಗುಣಮುಖವಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಹೇಳಿಕೆ ನೀಡಿದೆ.

ಪುಣೆ ಜಿಲ್ಲೆಯ ಪುರಂದರ ತೆಹಸಿಲ್ ನಿಂದ ವರದಿಯಾದ ಜಿಕಾ ವೈರಸ್ ಪ್ರಕರಣದಿಂದ ಪರಿಸ್ಥಿತಿಯ ಪರಿಶೀಲನೆಗಾಗಿ ದೆಹಲಿಯಿಂದ ಬಹು ಶಿಸ್ತ್ರೀಯ ತಂಡವೊಂದು ಮಹಾರಾಷ್ಟ್ರಕ್ಕೆ ಬರಲಿದೆ ಎಂಬ ಮಾಹಿತಿ ಬಂದಿರುವುದಾಗಿ ರಾಜ್ಯ ರಾಜ್ಯ ಕಣ್ಗಾವಲು ಅಧಿಕಾರಿ ಡಾ. ಪ್ರದೀಪ್ ಅವಾಟೆ ತಿಳಿಸಿದ್ದಾರೆ.

ಈ ತಂಡ  ಜಿಕಾ ವೈರಸ್ ಪತ್ತೆಯಾದ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಾಮರ್ಶೆ ನಡೆಸಲಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.

ಶಂಕಿತ ರೋಗಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಹಳ್ಲಿಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನಾಶಪಡಿಸಲಾಗುತ್ತಿದೆ ಎಂದು ಪುಣೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಭಗವಾನ್ ಪವಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com