ತಮಿಳು ನಾಡು: ಎಡಿಎಂಕೆ ಮಾಜಿ ಸಚಿವ ಎಸ್ಪಿ ವೇಲುಮಣಿಗೆ ಸೇರಿದ 52 ಸ್ಥಳಗಳ ಮೇಲೆ ಡಿವಿಎಸಿ ದಾಳಿ, ಎಫ್ಐಆರ್ ದಾಖಲು

ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಒಲವು ತೋರಿಸಿರುವ ಆರೋಪದ ಮೇಲೆ ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ(ಡಿವಿಎಸಿ)ಎಡಿಎಂಕೆ ಮಾಜಿ ಸಚಿವ ಎಸ್ ಪಿ ವೇಲುಮಣಿ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಮಂಗಳವಾರ ದಾಳಿ ನಡೆಸಿದೆ.
ಮಾಜಿ ಸಚಿವ ಎಸ್ ಪಿ ವೇಲುಮಣಿ
ಮಾಜಿ ಸಚಿವ ಎಸ್ ಪಿ ವೇಲುಮಣಿ

ಕೊಯಮತ್ತೂರು: ಬೃಹತ್ ಚೆನ್ನೈ ಮತ್ತು ಕೊಯಮತ್ತೂರು ಕಾರ್ಪೊರೇಶನ್‌ಗಳಲ್ಲಿ ಸರಕು/ಸೇವೆಗಳ ಟೆಂಡರ್ ಕೆಲಸಗಳ ನಿರ್ಮಾಣ ಮತ್ತು ಪೂರೈಕೆಯನ್ನು ನೀಡುವಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಒಲವು ತೋರಿಸಿರುವ ಆರೋಪದ ಮೇಲೆ ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ(ಡಿವಿಎಸಿ)ಎಡಿಎಂಕೆ ಮಾಜಿ ಸಚಿವ ಎಸ್ ಪಿ ವೇಲುಮಣಿ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಮಂಗಳವಾರ ದಾಳಿ ನಡೆಸಿದೆ.

ಮಾಜಿ ಸಚಿವ ವೇಲುಮಣಿಯವರಿಗೆ ಸೇರಿದ ಕೊಯಮತ್ತೂರು, ಚೆನ್ನೈ, ದಿಂಡಿಗುಲು ಮತ್ತು ಕಾಂಚೀಪುರಂಗಳಲ್ಲಿ ದಾಳಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ಡಿಎಂಕೆ ಸಂಸದ ಆರ್ ಎಸ್ ಭಾರತಿ ಮತ್ತು ಅರಪ್ಪೋರ್ ಇಯಕ್ಕಂ ಸಂಚಾಲಕ ವಿ ಜಯರಾಮನ್ ಅವರ ದೂರಿನ ಆಧಾರದ ಮೇಲೆ ಡಿವಿಎಸಿಯ ವಿಶೇಷ ತನಿಖಾ ವಿಭಾಗವು ನಡೆಸಿದ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಎಸ್ಪಿ ವೇಲುಮಣಿ, ಅವರ ಸಹೋದರ ಪಿ ಅನ್ಬರಸನ್ ಮತ್ತು ಇತರ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಮಾಜಿ ಸಚಿವ ವೇಲುಮಣಿ ಮತ್ತು ಇತರರ ವಿರುದ್ಧ ಸೆಕ್ಷನ್ 120ಬಿ ಆರ್/ಡಬ್ಲ್ಯು 420, ಐಪಿಸಿ ಸೆಕ್ಷನ್ 409 ಮತ್ತು ಸೆಕ್ಷನ್ಸ್ 13(2) ಆರ್/ಡಬ್ಲ್ಯು 13(1ಹೆಚ್ ಸಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(1)(ಡಿ), 1988 ಆರ್/ಡಬ್ಲ್ಯು 109 ಐಪಿಸಿಯಡಿ ಕೇಸು ದಾಖಲಾಗಿದೆ.

ವೇಲುಮಣಿ ಮತ್ತು ಬೃಹತ್ ಚೆನ್ನೈ ನಗರ, ಕೊಯಮತ್ತೂರು ನಗರದ ಕಾರ್ಪೊರೇಷನ್‌ಗಳ ಇತರ ಮತ್ತು ಅಪರಿಚಿತ ಅಧಿಕಾರಿಗಳು, 2014 ರಿಂದ 2018 ರ ಅವಧಿಯಲ್ಲಿ ಅಪ್ರಾಮಾಣಿಕ ಉದ್ದೇಶದಿಂದ ಬಸ್ ಪಥದ ರಸ್ತೆ, ಚರಂಡಿ ನೀರಿನ ಹಾದು ಹೋಗುವ ಚರಂಡಿ ಮತ್ತು ಒಪ್ಪಂದಗಳಲ್ಲಿ ಅಪ್ರಬುದ್ಧವಾಗಿ ಟೆಂಡರ್‌ಗಳನ್ನು ನೀಡಿದ್ದರು. ಬೃಹತ್ ಚೆನ್ನೈ ಮತ್ತು ಕೊಯಮತ್ತೂರು ನಗರ ಪಾಲಿಕೆಗಳಲ್ಲಿನ ಆರೋಗ್ಯ ಇಲಾಖೆಗೆ ಸಿಬ್ಬಂದಿಯನ್ನು ಹೊರಗುತ್ತಿಗೆ ನೀಡುವುದು ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನವನ್ನು ಉಲ್ಲಂಘಿಸುವ ಮೂಲಕ ಮತ್ತು ಸರ್ಕಾರದ ಸಾರ್ವಜನಿಕ ಹಣವನ್ನು ವಂಚನೆ ಮತ್ತು ಕ್ರಿಮಿನಲ್ ದುರುಪಯೋಗಕ್ಕೆ ಒಳಪಡಿಸಲಾಗಿದೆ ಎಂದು ಡಿವಿಎಸಿ ಎಫ್ಐಆರ್ ನಲ್ಲಿ ದಾಖಲಿಸಿದೆ.

ಡಿವಿಎಸಿ ಅಧಿಕಾರಿಗಳು ಕೊಯಮತ್ತೂರಿನ ಕುಣಿಯಮುತ್ತೂರು ಸಮೀಪದ ಸುಗುಣಪುರಂನಲ್ಲಿರುವ ಎಸ್ಪಿ ವೇಲುಮಣಿ ನಿವಾಸ, ತೋಂಡಮುತ್ತೂರಿನ ತೋಟದ ಮನೆಯಲ್ಲಿ ದಾಳಿ ನಡೆಸುತ್ತಿದ್ದಾರೆ. ಕೊಯಮತ್ತೂರಿನಲ್ಲಿ 35, ಚೆನ್ನೈನಲ್ಲಿ 15, ದಿಂಡಿಗಲ್ ಮತ್ತು ಕಾಂಚೀಪುರದಲ್ಲಿ ತಲಾ 1 ಸೇರಿದಂತೆ ಒಟ್ಟು 52 ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com