ಉತ್ತರಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷೀದ್, ರಾಜೀವ್ ಶುಕ್ಲಾ ಮತ್ತು ಆರ್ ಪಿ ಎನ್ ಸಿಂಗ್ ಸೇರಿದಂತೆ ಮತ್ತಿತರ ನಾಯಕರನ್ನು ಈ ಸಮಿತಿ ಒಳಗೊಂಡಿದೆ.
Published: 11th August 2021 04:05 PM | Last Updated: 11th August 2021 04:18 PM | A+A A-

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಉತ್ತ ರಪ್ರದೇಶದಲ್ಲಿ ಚುನಾವಣಾ ಸಮಿತಿಯೊಂದನ್ನು ರಚಿಸಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷೀದ್, ರಾಜೀವ್ ಶುಕ್ಲಾ ಮತ್ತು ಆರ್ ಪಿ ಎನ್ ಸಿಂಗ್ ಸೇರಿದಂತೆ ಮತ್ತಿತರ ನಾಯಕರನ್ನು ಈ ಸಮಿತಿ ಒಳಗೊಂಡಿದೆ.
ಈ ಬಗ್ಗೆ ಮಾತನಾಡಿದ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಲಲ್ಲು, ಮುಂದಿನ ವರ್ಷ ಚುನಾವಣೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ 'ದೇಖ್- ರೇಖ್' ಮಾದರಿಯ ಅನುಸಾರ ಪಕ್ಷ ಎದುರಿಸಲಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ವಿರುದ್ಧ ಬೀದಿಗಳಲ್ಲಿ ಹೋರಾಟ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಗಸ್ಟ್ ಕ್ರಾಂತಿ ದಿವಸದ ಅಂಗವಾಗಿ ಉತ್ತರಪ್ರದೇಶ ಕಾಂಗ್ರೆಸ್ ರಾಜ್ಯಾದ್ಯಂತ 'ಬಿಜೆಪಿ ಗದ್ದಿ ಚೋಡೋ'(ಬಿಜೆಪಿ ಗದ್ದುಗೆ ಬಿಡಬೇಕು) ಎನ್ನುವ ಆಂದೋಲನವನ್ನು ಈ ವಾರ ಹಮ್ಮಿಕೊಂಡಿದೆ.