ಮುಂಬೈ ಮಾಜಿ ಆಯುಕ್ತ, ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಗೆ 25 ಸಾವಿರ ರೂ ದಂಡ

ಮುಂಬೈ ನ ಮಾಜಿ ಆಯುಕ್ತ, ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ತನಿಖಾ ಆಯೋಗ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಪರಮ್ ಬಿರ್ ಸಿಂಗ್(ಸಂಗ್ರಹ ಚಿತ್ರ)
ಪರಮ್ ಬಿರ್ ಸಿಂಗ್(ಸಂಗ್ರಹ ಚಿತ್ರ)

ಮುಂಬೈ: ಮುಂಬೈ ನ ಮಾಜಿ ಆಯುಕ್ತ, ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ತನಿಖಾ ಆಯೋಗ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಅನಿಲ್ ದೇಶ್ ಮುಖ್ ವಿರುದ್ಧದ ಆರೋಪ ಮಾಡಿದ್ದ ಪ್ರಕರಣದಲ್ಲಿ ತನಿಖಾ ಆಯೋಗದ ಎದುರು ಹಾಜರಾಗದೇ ಇದ್ದ ಹಿನ್ನೆಲೆ ದಂಡ ವಿಧಿಸಲಾಗಿದೆ ಎಂದು ಸರ್ಕಾರಿ ವಕೀಲರೊಬ್ಬರು ತಿಳಿಸಿದ್ದಾರೆ. 

ಈ ಹಿಂದಿನ ವಿಚಾರಣೆಯಲ್ಲಿಯೇ ತನಿಖಾ ಆಯೋಗ ಸಿಂಗ್ ಗೆ ಖುದ್ದು ಹಾಜರಾಗಲು ಕೊನೆಯ ಅವಕಾಶ ನೀಡಿತ್ತು. ಈಗ ಎರಡನೇ ಬಾರಿ ಪರಮ್ ಬಿರ್ ಸಿಂಗ್ ಗೆ ದಂಡ ವಿಧಿಸಲಾಗಿದೆ. ಇದೇ ರೀತಿಯಲ್ಲಿ ತನಿಖಾ ತಂಡದ ಎದುರು ಹಾಜರಾಗದೇ ಇದ್ದದ್ದಕ್ಕೆ ಜೂನ್ ನಲ್ಲಿ ಆಯೋಗ ಪರಮ್ ಬಿರ್ ಸಿಂಗ್ ಗೆ 5,000 ರೂಪಾಯಿಗಳ ದಂಡ ವಿಧಿಸಿತ್ತು.

ಈ ದಂಡದ ಮೊತ್ತವನ್ನು ಸಿಎಂ ಕೋವಿಡ್-19 ಪರಿಹಾರ ನಿಧಿಗೆ ನೀಡಲಾಗುತ್ತದೆ. ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಪರಮ್ ಬಿರ್ ಸಿಂಗ್ ಅವರನ್ನು ಹೋಮ್ ಗಾರ್ಡ್ಸ್ ವಿಭಾಗಕ್ಕೆ ಮಾರ್ಚ್ ನಲ್ಲಿ  ವರ್ಗಾವಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ಸಿಂಗ್, "ಗೃಹ ಸಚಿವ ಅನಿಲ್ ದೇಶ್ ಮುಖ್ ಮುಂಬೈ ನ ರೆಸ್ಟೋರೆಂಟ್ ಹಾಗೂ ಬಾರ್ ಮಾಲಿಕರಿಂದ ಹಣ ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳನ್ನು ಕೇಳುತ್ತಿದ್ದರು" ಎಂಬ ಆರೋಪ ಮಾಡಿದ್ದರು.

ಎನ್ ಸಿಪಿ ನಾಯಕರಾಗಿರುವ ದೇಶ್ ಮುಖ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಆರೋಪದ ಹಿನ್ನೆಲೆಯಲ್ಲಿ ಇಡಿ ಹಾಗೂ ಸಿಬಿಐ ಈ ಕುರಿತು ತನಿಖೆ ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com