ಟ್ವೀಟರ್ ನಂತೆ ರಾಹುಲ್ ಗಾಂಧಿಯ ಪೋಸ್ಟ್ ಕಿತ್ತು ಹಾಕಿದ ಫೇಸ್ ಬುಕ್!

ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಯಾಗಿದ್ದ ಒಂಬತ್ತು ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೋಸ್ಟ್ ಮಾಡಿದ್ದು ಈ ಪೋಸ್ಟ್ ಅನ್ನು ಫೇಸ್ ಬುಕ್ ಕಿತ್ತುಹಾಕಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಯಾಗಿದ್ದ ಒಂಬತ್ತು ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೋಸ್ಟ್ ಮಾಡಿದ್ದು ಈ ಪೋಸ್ಟ್ ಅನ್ನು ಫೇಸ್ ಬುಕ್ ಕಿತ್ತುಹಾಕಿದೆ. 

ಇದೇ ಫೋಟೋ ಸಂಬಂಧ ಟ್ವೀಟರ್ ಈ ಹಿಂದೆ ರಾಹುಲ್ ಗಾಂಧಿ ಅವರ ಟ್ವೀಟ್ ಅನ್ನು ಅಳಿಸಿ ಹಾಕಿತ್ತು. ಇದೀಗ ಫೇಸ್ಬುಕ್ ಇದು ಸಾಮಾಜಿಕ ಮಾಧ್ಯಮ ವೇದಿಕೆಯ ನೀತಿಗಳ ಉಲ್ಲಂಘನೆ ಎಂದು ಆರೋಪಿ ಪೋಸ್ಟ್ ಅನ್ನು ತೆಗೆದು ಹಾಕಿದೆ.

ಮೂಲಗಳ ಪ್ರಕಾರ, ಸಂಸ್ಧೆ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್)ಕ್ಕೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ಪೋಸ್ಟ್‌ಗಳನ್ನು ತೆಗೆಯುವ ಬಗ್ಗೆ ತಿಳಿಸಿದೆ.

ಈ ಹಿಂದೆ, ಫೇಸ್‌ಬುಕ್ ಗಾಂಧಿಗೆ ಬರೆದ ಪತ್ರದಲ್ಲಿ ಇನ್‌ಸ್ಟಾಗ್ರಾಮ್-ಫೇಸ್‌ಬುಕ್‌ನ ಫೋಟೊಶೇರಿಂಗ್ ಪ್ಲಾಟ್‌ಫಾರ್ಮ್‌ನಿಂದ ಪೋಟೋವನ್ನು ತೆಗೆದುಹಾಕುವಂತೆ ಸೂಚಿಸಿತ್ತು. 

'ನಮ್ಮ ನೀತಿಗಳನ್ನು ಉಲ್ಲಂಘಿಸಿದ ಕಾರಣ ನಾವು ಪೋಸ್ಟ್ ಅನ್ನು ತೆಗೆದು ಹಾಕಿದ್ದೇವೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com