ಹರ್ಯಾಣ: 'ರೈತರ ತಲೆಯನ್ನು ಒಡೆಯಿರಿ' ಪೊಲೀಸರಿಗೆ ಉಪವಿಭಾಗಾಧಿಕಾರಿ ನಿರ್ದೇಶನದ ವಿಡಿಯೋ ವೈರಲ್!

ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಒಡೆಯುವಂತೆ ಹರಿಯಾಣದ ಉನ್ನತ ಜಿಲ್ಲಾ ಅಧಿಕಾರಿಯೊಬ್ಬರು ಪೊಲೀಸರಿಗೆ ನಿರ್ದೇಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 
ಉಪ ವಿಭಾಗಾಧಿಕಾರಿ  ಆಯುಷ್ ಸಿನ್ಹಾ,
ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ,

ಚಂಡಿಘಡ: ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಒಡೆಯುವಂತೆ ಹರಿಯಾಣದ ಉನ್ನತ ಜಿಲ್ಲಾ ಅಧಿಕಾರಿಯೊಬ್ಬರು ಪೊಲೀಸರಿಗೆ ನಿರ್ದೇಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ಬಿಜೆಪಿ ಸಭೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಶನಿವಾರ ಹರಿಯಾಣ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಘಟನೆಯಲ್ಲಿ ಸುಮಾರು 10 ರೈತರು ಗಾಯಗೊಂಡಿದ್ದಾರೆ. ಈ ಮಧ್ಯೆ ಕರ್ನಾಲ್ ಉಪ ವಿಭಾಗಧಿಕಾರಿ ಆಯುಷ್ ಸಿನ್ಹಾ, ಯಾವುದೇ ಪ್ರತಿಭಟನಾಕಾರರು ಆ ಪ್ರದೇಶದಲ್ಲಿ ನಿರ್ದಿಷ್ಟ ಬ್ಯಾರಿಕೇಡ್‌ನಿಂದ ಆಚೆ ಹೋಗಬಾರದು ಎಂದು ಪೊಲೀಸರಿಗೆ ಸೂಚಿಸುವುದು ವಿಡಿಯೋದಲ್ಲಿದೆ.

ಇದು ಅತ್ಯಂತ ಸರಳ ಮತ್ತು ಸ್ಪಷ್ಟವಾಗಿದೆ. ಅವರು ಯಾರೇ ಆಗಿರಲಿ, ಎಲ್ಲಿಂದಲೇ ಬಂದವರಾಗಿರಿ, ಯಾರೊಬ್ಬರೂ ಅಲ್ಲಿಗೆ ತಲುಪಲು ಅವಕಾಶ ನೀಡುವಂತಿಲ್ಲ. ಯಾವುದೇ ಸಂದರ್ಭದಲ್ಲಿಯೂ ಈ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಲು ನಾವು ಅವಕಾಶ ಕೊಡುವುದಿಲ್ಲ, ಹಾಗೇನಾದರೂ ಆದರೆ ನಿಮ್ಮ ಲಾಠಿಯಿಂದ ಅವರ ತೆಲೆಗೆ ಒಡೆಯಿರಿ. ಇದು ಅತ್ಯಂತ ಸ್ಪಷ್ಟವಾಗಿದೆ. ನಿಮಗೆ ಇನ್ಯಾವುದೇ ಸೂಚನೆಯ ಅಗತ್ಯವಿಲ್ಲ ಎಂದು ಸಿನ್ಹಾ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋವನ್ನು ತಿರುಚಲಾಗಿದೆ ಮತ್ತು ಉಪ ವಿಭಾಗಾಧಿಕಾರಿ ಹಾಗೆ ಹೇಳಿರಲಿಲ್ಲ ಎಂದು ನಾನು ಆಶಿಸಿದ್ದೇನೆ. ಆದರೆ, ಅವರು ಹಾಗೆ ಹೇಳಿದ್ದೆ ಆದಲ್ಲಿ ನಮ್ಮ ಪ್ರಜೆಗಳೊಂದಿಗೆ ಹೀಗೆ ನಡೆದುಕೊಳ್ಳುವುದು ಪ್ರಜಾಸತ್ತಾತ್ಮಕ ಭಾರತಕ್ಕೆ ಸ್ವೀಕಾರರ್ಹವಲ್ಲ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪೊಲೀಸರ ಕ್ರಮವನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸರ್ಜೆವಾಲಾ, ಇಂದು ಹರ್ಯಾಣದ ಆತ್ಮದ ಮೇಲೆ ಲಾಠಿಯನ್ನೆತ್ತಿದ್ದೀರಿ. ಮುಂದಿನ ಪೀಳಿಗೆಗಳು ರಸ್ತೆಗಳ ಮೇಲೆ ಚೆಲ್ಲಿದ್ದ ರೈತರ ರಕ್ತವನ್ನು ನೆನಪಿಸಿಕೊಳ್ಳಲಿವೆ ಎಂದು ಟ್ವೀಟ್ ಮಾಡಿದ್ದಾರೆ. ಪೊಲೀಸರ ಕ್ರಮವು ಹರಿಯಾಣ ಪೊಲೀಸರ ನಿಜವಾದ ರೂಪವನ್ನು ಬಹಿರಂಗಗೊಳಿಸಿದೆ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com