ಕೋವಿಡ್-19: ದೇಶದಲ್ಲಿ ಇಂದು 9,765 ಹೊಸ ಸೋಂಕು ಪ್ರಕರಣ, 477 ಸಾವು
ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9,765 ಹೊಸ ಸೋಂಕು ಪ್ರಕರಣಗಳ ಹಾಗೂ 477 ಸಾವು ವರದಿಯಾಗಿದೆ.
Published: 02nd December 2021 11:20 AM | Last Updated: 02nd December 2021 01:52 PM | A+A A-

ಕೋವಿಡ್-19 ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9,765 ಹೊಸ ಸೋಂಕು ಪ್ರಕರಣಗಳ ಹಾಗೂ 477 ಸಾವು ವರದಿಯಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 9,765 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಆ ಮೂಲಕ ದೇಶದಲ್ಲಿನ ಪ್ರಸ್ತುತ ದೈನಂದಿನ ಸೋಂಕು ಪ್ರಮಾಣ ಶೇ.0.89ರಷ್ಟಿದ್ದು, ವಾರದ ಸೋಂಕು ಪ್ರಮಾಣ ಶೇ.0.85ರಷ್ಟಿದೆ.