ಮೊಬೈಲ್‍ಗಾಗಿ ಮಹಿಳೆಯನ್ನು 150 ಮೀ ದೂರ ಬೈಕಿನಲ್ಲಿ ಎಳೆದೊಯ್ದ ಖದೀಮರು, ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಎಗ್ಗಿಲ್ಲದೇ ಸಾಗುತ್ತಿದೆ. ಕಳ್ಳರ ಅಟ್ಟಹಾಸ ಮಿತಿ ಮೀರಿದ್ದು ಸಾರ್ವಜನಿಕರು ಭಯದಲ್ಲೇ ಪ್ರಯಾಣಿಸುವಂತಹ ಸಂದರ್ಭ ಎದುರಾಗಿದೆ.
Published: 17th December 2021 06:26 PM | Last Updated: 17th December 2021 06:26 PM | A+A A-

ಮಹಿಳೆಯನ್ನು ಬೈಕ್ ನಲ್ಲಿ ಎಳೆದೊಯ್ಯುತ್ತಿರುವ ಕಳ್ಳರು
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಎಗ್ಗಿಲ್ಲದೇ ಸಾಗುತ್ತಿದೆ. ಕಳ್ಳರ ಅಟ್ಟಹಾಸ ಮಿತಿ ಮೀರಿದ್ದು ಸಾರ್ವಜನಿಕರು ಭಯದಲ್ಲೇ ಪ್ರಯಾಣಿಸುವಂತಹ ಸಂದರ್ಭ ಎದುರಾಗಿದೆ.
ಬೈಕಿನಲ್ಲಿ ಬಂದ ಕಳ್ಳರು ಮಹಿಳೆಯ ಬಳಿ ಇದ್ದ ಮೊಬೈಲ್ ಕಿತ್ತುಕೊಳ್ಳುವ ಸಲುವಾಗಿ ಆಕೆಯನ್ನು ರಸ್ತೆಯ ಮೇಲೆ ಎಳೆದೊಯ್ಯುತ್ತಿರುವ ಘಟನೆ ದೆಹಲಿಯ ಶಾಲಿಮರ್ ಬಾಗ್‍ನಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊಬೈಲ್‍ಗಾಗಿ ಮಹಿಳೆಯನ್ನು 150 ಮೀ ದೂರ ಬೈಕಿನಲ್ಲಿ ಎಳೆದೊಯ್ದ ಖದೀಮರು, ವಿಡಿಯೋ ವೈರಲ್#Delhi_Crime #MobileSnatchers #womenDragged pic.twitter.com/ARKL1iUXWs
— kannadaprabha (@KannadaPrabha) December 17, 2021
ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಬೈಕ್ ಓಡಿಸುತ್ತಿದ್ದು, ಹಿಂದೆ ಕುಳಿತಿರುವ ಮತ್ತೊಬ್ಬ ವ್ಯಕ್ತಿ ಮಹಿಳೆಯನ್ನು ಹಿಡಿದು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ನಂತರ ಒನ್ ವೇಯಲ್ಲಿ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ರಸ್ತೆಯ ಮಧ್ಯೆಯೇ ಬಿಸಾಡಿ ಹೋಗುತ್ತಾರೆ. ಆಗ ಬಿದ್ದಿರುವ ಮಹಿಳೆಯನ್ನು ಕಂಡ ಸಾರ್ವಜನಿಕರು ಆಕೆಯ ಸಹಾಯಕ್ಕೆ ಬಂದು ರಸ್ತೆ ಮಧ್ಯದಿಂದ ಬದಿಗೆ ಕರೆದುಕೊಂಡು ಹೋಗುವುದನ್ನು ನೋಡಬಹುದು.
ಸುಮಾರು 150 ಮೀಟರ್ ಎಳೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ, ಪೋರ್ಟಿಸ್ ಕೆಲಸ ಮಾಡುವ ಇವರನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.