ಮತದಾರರ ಪಟ್ಟಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಚುನಾವಣಾ ಅಕ್ರಮಕ್ಕೆ ತಡೆ: ಸರ್ಕಾರಿ ಮೂಲಗಳು

ದೀರ್ಘ ಸಮಯದಿಂದ ಚಿಂತನೆಯ ಹಂತದಲ್ಲಿರುವ ಹಲವು ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಲು ನೂತನ ಮತದಾನ ಮಸೂದೆ ತಿದ್ದುಪಡಿ ನೆರವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮತದಾರರ ಪಟ್ಟಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವ ತಿದ್ದುಪಡಿ ಮಸೂದೆ ಜಾರಿಯಿಂದ ನಕಲಿ ಮತದಾರರಿಗೆ ಕಡಿವಾಣ ಬೀಳುವುದಾಗಿ ಬಿಜೆಪಿ ಸರ್ಕಾರ ತಿಳಿಸಿದೆ. 

ಒಬ್ಬ ವ್ಯಕ್ತಿ ಹೆಸರಲ್ಲಿ ಹಲವೆಡೆ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸುವುದಕ್ಕೆ ಈ ಮಸೂದೆಯಿಂದ ಕಡಿವಾಣ ಬೀಳುವುದಾಗಿ ಸರ್ಕಾರ ಆಶಾಭಾವ ವ್ಯಕ್ತಪಡಿಸಿದೆ. ದೀರ್ಘ ಸಮಯದಿಂದ ಚಿಂತನೆಯ ಹಂತದಲ್ಲಿರುವ ಹಲವು ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಲು ನೂತನ ಮತದಾನ ಮಸೂದೆ ತಿದ್ದುಪಡಿ ನೆರವಾಗಲಿದೆ.

ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿಚ್ಛಿಸುವವರ ಅರ್ಜಿ ಆಧಾರ್ ಇಲ್ಲವೆಂಬ ಕಾರಣಕ್ಕೆ ತಿರಸ್ಕೃತಗೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. 

ಮತದಾರರು ತಾವು ವಾಸಸ್ಥಳ ಬದಲಾಯಿಸಿದಾಗಲೆಲ್ಲ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸುತ್ತಾರೆ. ಹೀಗಾಗಿ ಅವರ ಹೆಸರು ಹಲವು ಕ್ಷೇತ್ರಗಳಲ್ಲಿ ಪತ್ತೆಯಾಗುವ ಸಾಧ್ಯತೆ ಇರುತ್ತದೆ. ನೂತನ ವ್ಯವಸ್ಥೆಯಿಂದ ಚುನಾವಣಾ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಲಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com