ಮೋದಿ
ಮೋದಿ

ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದ್ದ ಭಾರತ ಇಂದು ಅಪಾಯದಲ್ಲಿದೆ: ಪ್ರಧಾನಿ ಮೋದಿ

ಸಿಖ್ ಗುರುಗಳು ಎಚ್ಚರಿಸಿದ ಅಪಾಯಗಳು ಇನ್ನೂ ಅಸ್ತಿತ್ವದಲ್ಲಿವೆ. ಔರಂಗಜೇಬ್ ವಿರುದ್ಧ ಗುರು ತೇಜ್ ಬಹದ್ದೂರ್ ಅವರ ಕೆಚ್ಚೆದೆಯ ಹೋರಾಟಗಳು ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದದ ವಿರುದ್ಧ ಹೇಗೆ ಹೋರಾಡಬೇಕೆಂದು ದೇಶಕ್ಕೆ ಕಲಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಹಮದಾಬಾದ್: ಸಿಖ್ ಗುರುಗಳು ಎಚ್ಚರಿಸಿದ ಅಪಾಯಗಳು ಇನ್ನೂ ಅಸ್ತಿತ್ವದಲ್ಲಿವೆ. ಔರಂಗಜೇಬ್ ವಿರುದ್ಧ ಗುರು ತೇಜ್ ಬಹದ್ದೂರ್ ಅವರ ಕೆಚ್ಚೆದೆಯ ಹೋರಾಟಗಳು ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದದ ವಿರುದ್ಧ ಹೇಗೆ ಹೋರಾಡಬೇಕೆಂದು ದೇಶಕ್ಕೆ ಕಲಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಗುಜರಾತಿನ ಕಚ್ ಜಿಲ್ಲೆಯ ಲಖ್‍ಪತ್ ಗುರುದ್ವಾರದಲ್ಲಿ ಗುರುಪುರಬ್ ಆಚರಣೆಯ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಗುರುಗಳು ಎಚ್ಚರಿಸುತ್ತಿದ್ದ ಅಪಾಯಗಳು ಇಂದಿಗೂ ಅದೇ ರೂಪದಲ್ಲಿವೆ. ಹಾಗಾಗಿ ನಾವು ಜಾಗೃತರಾಗಿ ನಮ್ಮ ದೇಶವನ್ನು ರಕ್ಷಿಸಬೇಕು. ಗುರುನಾನಕ್ ದೇವ್‍ಜಿಯವರ ಆಶೀರ್ವಾದದಿಂದ ನಾವು ನಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಮತ್ತು ದೇಶವು ಇನ್ನಷ್ಟು ಎತ್ತರಕ್ಕೆ ತಲುಪುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.

ಪಂಜಾಬ್‍ನ ಲೂಧಿಯಾನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ ಸಿಖ್ ಸಮುದಾಯಕ್ಕೆ ಮೋದಿ ಮನವಿ ಮಾಡಿದ್ದಾರೆ.

ಗುರುನಾನಕ್ ದೇವ್‍ಜಿ ಮತ್ತು ಅವರ ಬೋಧನೆಗಳ ಕುರಿತು ಮಾತನಾಡಿದ ಮೋದಿ, ಸಿಖ್ ಗುರು ಜನಿಸಿದ ಅವಧಿಯಲ್ಲಿ ವಿದೇಶಿ ಆಕ್ರಮಣಕಾರರು ಭಾರತದ ಆತ್ಮವಿಶ್ವಾಸವನ್ನು ಹದಗೆಡಿಸುತ್ತಿದ್ದರು. ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದ್ದ ಭಾರತ ಅಪಾಯದಲ್ಲಿದೆ. ಗುರುನಾನಕ್ ದೇವ್ ಜೀ ತಮ್ಮ ಜ್ಞಾನದ ಬೆಳಕನ್ನು ಹರಡದಿದ್ದರೆ, ಆಗ ಏನಾಗುತ್ತಿತ್ತು? ಗುರು ನಾನಕ್‍ಜಿ ಮತ್ತು ಅವರ ನಂತರದ ಗುರುಗಳು ಭಾರತದ ಪ್ರಜ್ಞೆಯನ್ನು ಬೆಳಗುವಂತೆ ಮಾಡಿರುವುದಲ್ಲದೇ, ಭಾರತವನ್ನು ಸುರಕ್ಷಿತವಾಗಿಡಲು ಮಾರ್ಗವನ್ನು ರೂಪಿಸಿದರು ಎಂದು ಹೇಳಿದರು.

ಸಿಖ್ ಗುರುಗಳ ಕೊಡುಗೆ ಕೇವಲ ಸಾಮಾಜಿಕ ಸುಧಾರಣೆಗಳು ಮತ್ತು ಆಧ್ಯಾತ್ಮಿಕತೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಗುರುಗಳು ದೇಶಕ್ಕೆ ನಾಯಕತ್ವವನ್ನು ಸಹ ನೀಡಿದ್ದಾರೆ. ಗುರು ತೇಜ್ ಬಹದ್ದೂರ್ ಮಾಡಿದ ತ್ಯಾಗದಿಂದಾಗಿ ಇದೀಗಲೂ ಅವರ 400ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ ಮತ್ತು ಔರಂಗಜೇಬ್ ವಿರುದ್ಧ ಅವರ ಕೆಚ್ಚೆದೆಯ ಕಾರ್ಯಗಳು ದೇಶವು ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದದ ವಿರುದ್ಧ ಹೇಗೆ ಹೋರಾಡಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಅವರ ಇಡೀ ಜೀವನವು ರಾಷ್ಟ್ರವನ್ನು ಮೊದಲ ಸ್ಥಾನದಲ್ಲಿ ಇರಿಸುವಂತಾಗಿದೆ. ಆ ಸಮಯದಲ್ಲಿ (ಮೊಘಲರು ಅಧಿಕಾರದಲ್ಲಿದ್ದಾಗ) ತುಂಬಾ ದೌರ್ಜನ್ಯಗಳು ನಡೆದಿವೆ, ಗುರುನಾನಕ್ ದೇವ್ ಜಿ ನಂತರ ಬಂದ ಸಿಖ್ ಗುರುಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಹಿಂಜರಿಯಲಿಲ್ಲ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com