ಮೇಲಾಧಿಕಾರಿ ಮೇಲೆ ಸಿಆರ್‌ಪಿಎಫ್ ಹೆಡ್ ಕಾನ್‌ಸ್ಟೆಬಲ್ ನಿಂದ ಗುಂಡಿನ ದಾಳಿ, ಸಾವು!
ತೆಲಂಗಾಣದ ಮುಲುಗು ಜಿಲ್ಲೆಯ ವೆಂಕಟಾಪುರಂ ಗ್ರಾಮದಲ್ಲಿ ಎಸಿಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್) ಹೆಡ್ ಕಾನ್ಸ್‌ಟೇಬಲ್ ತನ್ನ ಮೇಲಾಧಿಕಾರಿಯ ಮೇಲೆ ಗುಂಡು ಹಾರಿಸಿ, ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
Published: 26th December 2021 09:19 PM | Last Updated: 26th December 2021 09:19 PM | A+A A-

ಸಂಗ್ರಹ ಚಿತ್ರ
ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯ ವೆಂಕಟಾಪುರಂ ಗ್ರಾಮದಲ್ಲಿ ಎಸಿಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್) ಹೆಡ್ ಕಾನ್ಸ್‌ಟೇಬಲ್ ತನ್ನ ಮೇಲಾಧಿಕಾರಿಯ ಮೇಲೆ ಗುಂಡು ಹಾರಿಸಿ, ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಸಬ್ ಇನ್ಸ್‌ಪೆಕ್ಟರ್ ಉಮೇಶ್ ಚಂದ್ರ ಸ್ಥಳದಲ್ಲೇ ಮೃತಪಟ್ಟರೆ, ಹೆಡ್ ಕಾನ್‌ಸ್ಟೆಬಲ್ ಸ್ಟೀಫನ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಸಿಆರ್‌ಪಿಎಫ್ ಎ39 ಬೆಟಾಲಿಯನ್‌ನ ಕ್ಯಾಂಪ್‌ನಲ್ಲಿ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದೆ.
ಸಿಆರ್‌ಪಿಎಫ್ ಶಿಬಿರದಲ್ಲಿ ಓರ್ವ ಹೆಡ್ ಕಾನ್‌ಸ್ಟೆಬಲ್ ಸಿಆರ್‌ಪಿಎಫ್‌ನ ಎಸ್‌ಐ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಎಸ್‌ಐ ಮೃತಪಟ್ಟಿದ್ದು, ಹೆಡ್ ಕಾನ್‌ಸ್ಟೆಬಲ್ ಸಹ ಗುಂಡು ಹಾರಿಸಿಕೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮುಲುಗು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಅಲ್ಲದೇ ಘಟನೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆಯನ್ನು ಸಹ ನಡೆಸಲಾಗುತ್ತಿದೆ.