ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಸರಿಯಾಗಿ ಧರಿಸುತ್ತಿಲ್ಲ, ಜನರ ನಿರ್ಲಕ್ಷ್ಯದಿಂದಾಗಿ ಕೊರೋನಾ 3ನೇ ಅಲೆಗೆ ಅದ್ದೂರಿ ಆಹ್ವಾನ!

ಕೋವಿಡ್-19 3ನೇ ಅಲೆ ಆತಂಕ ಭೀತಿ ನಡುವೆಯೇ ದೇಶಾದ್ಯಂತ ಜನರ ತೀವ್ರ ನಿರ್ಲಕ್ಷತೆ ಮುಂದುವರೆದಿದ್ದು, ಈ ಬಗ್ಗೆ ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಅವೆನ್ಯೂ ರಸ್ತೆಯಲ್ಲಿ ಸೇರಿರುವ ಜನತೆ
ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಅವೆನ್ಯೂ ರಸ್ತೆಯಲ್ಲಿ ಸೇರಿರುವ ಜನತೆ

ನವದೆಹಲಿ: ಕೋವಿಡ್-19 3ನೇ ಅಲೆ ಆತಂಕ ಭೀತಿ ನಡುವೆಯೇ ದೇಶಾದ್ಯಂತ ಜನರ ತೀವ್ರ ನಿರ್ಲಕ್ಷತೆ ಮುಂದುವರೆದಿದ್ದು, ಈ ಬಗ್ಗೆ ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲಲಿತ್ ಕಾಂತ್ ಅವರು ಮಾಹಿತಿ ನೀಡಿದ್ದು, ಅನ್ ಲಾಕ್ ಆದ ಬೆನ್ನಲ್ಲೇ ಜನರು ಸಾಮಾಜಿಕ ಜವಾಬ್ದಾರಿಗಳನ್ನೇ ಮರೆತಂತಿದೆ. ಮಾಸ್ಕ್ ಗಳ ಧರಿಸುತ್ತಿಲ್ಲ.. ಸಾಮೂಹಿಕವಾಗಿ ಜನ ಸೇರುತ್ತಿದ್ದಾರೆ. ಇದು ಕೋವಿಡ್-19 3ನೇ ಅಲೆಗೆ ಅದ್ದೂರಿ ಆಹ್ವಾನ  ನೀಡಿದಂತಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಮನೋವೈದ್ಯ ನಿಮಿಶ್ ದೇಸಾಯಿ, ಕೋವಿಡ್ ಸಾಮಾಜಿಕ ನಡವಳಿಕೆಯನ್ನು ಎತ್ತಿ ತೋರಿಸುವ ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲನೆ ಇಲ್ಲ.. ಸಾರ್ವಜನಿಕರಿಗೆ ಅಪಾಯಗಳ ಅರಿವಿಲ್ಲವೇನೋ.. ನಿರ್ಬಂಧಗಳನ್ನು ಪರಸ್ಪರ ಪಾಲನೆ ಮಾಡಬೇಕು. ಭಾರತವು  "ಸಾಮಾಜಿಕ ಬೇಜವಾಬ್ದಾರಿತನದ ಭಾರೀ ಪ್ರವೃತ್ತಿಯನ್ನು" ಕಂಡಿದೆ ಎಂದು ದೇಸಾಯಿ ಹೇಳಿದ್ದಾರೆ.

ಗಿರಿಧಾಮಗಳಿಗೆ ಪ್ರವೇಶಿಸಲು ಕಾಯುತ್ತಿರುವ ಕಾರುಗಳ ಸರತಿ ಸಾಲುಗಳು, ಕೋವಿಡ್ ಲಾಕ್ ಡೌನ್ ಬಳಿಕ ತಮ್ಮ ಜೀವನವನ್ನು ಮರಳಿ ಪಡೆಯಲು ತುಂಬಾ ಆಸಕ್ತಿ ಹೊಂದಿರುವ ಜನರು ರಸ್ತೆಗಳಲ್ಲಿ ರಾಜಾರೋಷವಾಗಿ ಯಾವುದೇ ಕೋವಿಡ್ ನಿಯಮಗಳ ಪಾಲನೆ ಮಾಡದೇ ಸುತ್ತಾಡುತ್ತಿದ್ದು, ಈ ಕುರಿತಂತೆ  ಸಾಮಾಜಿಕ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರಗಳ ನಂತರ ಕಳವಳಗಳು ಹೆಚ್ಚಾಗುತ್ತಿದೆ. ಪ್ರಮುಖವಾಗಿ ಪ್ರವಾಸಿ ತಾಣಗಳು, ರಜೆಯ ತಾಣಗಳು ಮತ್ತು ವಿರಾಮ ತಾಣಗಳಿಗೆ ಬರುವಾಗ ಜನರು ಮೂಲಭೂತ ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ.

"ಎಲ್ಲಾ ಸಂಸ್ಕೃತಿಗಳಲ್ಲಿ ಏನಾಗಬೇಕೋ ಅದನ್ನು ಅಪಾಯದ ಗ್ರಹಿಕೆ ಎಂದು ಕರೆಯಲಾಗುತ್ತದೆ. ಒಂದು ಸಮಾಜವು ಬೆದರಿಕೆಯನ್ನು ಎಷ್ಟು ಗ್ರಹಿಸುತ್ತದೆ ಮತ್ತು ಅದರ ನಡವಳಿಕೆಯನ್ನು ಅದಕ್ಕೆ ತಕ್ಕಂತೆ ಎಷ್ಟು ಮಾರ್ಪಡಿಸುತ್ತದೆ" ಎಂದು ಮಾನವ ವರ್ತನೆ ಮತ್ತು ಅಲೈಡ್ ಸೈನ್ಸ್ ಸಂಸ್ಥೆಯ ನಿರ್ದೇಶಕ ದೇಸಾಯಿ  ಹೇಳಿದ್ದಾರೆ. ಸಾಂಕ್ರಾಮಿಕ ರೋಗವು ಪ್ರಾಥಮಿಕವಾಗಿ ಆರೋಗ್ಯದ ಬಿಕ್ಕಟ್ಟಾಗಿದ್ದರೂ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸಮಾಜದ ಪಾತ್ರವನ್ನು ಕಡೆಗಣಿಸಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಭಾರತದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆಗಳು ಕಡಿಮೆಯಾದಂತೆ ಸಹಜ ಸ್ಥಿತಿಗೆ ಮರಳುವುದು ಸಮಾಧಾನಕರವಾಗಿದೆ. ಆದರೆ ಜನರು ಮೂಲ ಕೋವಿಡ್ ನಿಯಮಗಳನ್ನು ಪಾಲಿಸದ ದೃಶ್ಯಗಳು ಸಹ ಆತಂಕಕಾರಿಯಾಗಿದೆ. ಅದು ಮೊದಲ ಅಲೆಯ ಬಳಿಕದ ನಿರ್ಲಕ್ಷ್ಯತೆಯು ಎರಡನೆಯ ಅಲೆಗೆ ದಾರಿ  ಮಾಡಿಕೊಟ್ಟಿತ್ತು. ಇದೀಗ 2ನೇ ಅಲೆಯ ಬಳಿಕವೂ ಜನರಲ್ಲಿ ಅದೇ ನಿರ್ಲಕ್ಷ್ಯತ್ವವು ಕಾಣುತ್ತಿದ್ದು, ಹೀಗಾಗಿ 3ನೇ ಅಲೆಗೆ ಇದು ಖಂಡಿತಾ ದಾರಿ ಮಾಡುಕೊಡುತ್ತದೆ ಎನ್ನಲಾಗುತ್ತಿದೆ.

ಸೂಕ್ತ ರೀತಿಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿದರೆ 3ನೇ ಅಲೆಯನ್ನು ನಿಧಾನಗೊಳಿಸುತ್ತದೆ. ಅದೇ ನಿಯಮಗಳನ್ನು ಗಾಳಿಗೆ ತೂರಿ ವರ್ತಿಸಿದರೆ 3ನೇ ಅಲೆಯ ವೇಗವನ್ನು ಹೆಚ್ಚಿಸುತ್ತದೆ  ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಂವಹನ  ರೋಗಗಳ ವಿಭಾಗದ ಮಾಜಿ ಮುಖ್ಯಸ್ಥ ಕಾಂತ್ ಹೇಳಿದ್ದಾರೆ. 

ಹೇಗೇ ಇದ್ದರೂ ಸಾವು ಸಂಭವಿಸುತ್ತದೆ. ಕೋವಿಡ್ ಗೆ ಸೂಕ್ತ ಔಷಧಿ ಇಲ್ಲ.. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ.. ನಮ್ಮ ಜೀವ ನಮ್ಮ ಕೈಯಲ್ಲಿ ಇಲ್ಲ.. ಇಂತಹ ಆಲೋಚನೆಗಳು ಅಥವಾ ಮನೋಭಾವನೆಗಳು ಬೆಳೆದಾಗ ಸಾಮಾನ್ಯವಾಗಿಯೇ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ.  ಸಾಮೂಹಿಕ ಜನರ ನಡವಳಿಕೆಯ ಬದಲಾವಣೆಗೆ ಸರ್ಕಾರದ ಬಗ್ಗೆ ಸಾರ್ವಜನಿಕರ ನಂಬಿಕೆ ಬಹುಮುಖ್ಯವಾಗಿರುತ್ತದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ ಹೇಳಿದ್ದಾರೆ.

"ಜನರಿಗೆ ಸರ್ಕಾರದ ಮೇಲೆ ಹೆಚ್ಚಿನ ನಂಬಿಕೆ ಇದ್ದರೆ, ಅವರು ಅದರ ಸೂಚನೆಗಳನ್ನು ಅನುಸರಿಸುತ್ತಾರೆ. ಭಾರತದಲ್ಲಿ, ದುರದೃಷ್ಟವಶಾತ್ ರಾಜಕೀಯ ಪಕ್ಷಗಳ ಮೇಲಿನ ನಂಬಿಕೆ ತುಂಬಾ ಕಡಿಮೆ. ಅನೇಕ ಕುಟುಂಬಗಳು ವೈದ್ಯಕೀಯ ವೆಚ್ಚಗಳಿಗಾಗಿ ಸಾಲ ತೆಗೆದುಕೊಳ್ಳಬೇಕಾಗಿರುವುದನ್ನು ನೋಡಿ, ಜನರು ತಮ್ಮ  ಹಣವನ್ನು ಅವರ ಬಳಿಯೇ ಇಟ್ಟುಕೊಳ್ಳಲು ಇಚ್ಛಿಸುತ್ತಾರೆ. ಇದೇ ಕಾರಣಕ್ಕೆ ಅವರು ಅಗತ್ಯ ವಸ್ತುಗಳಿಗಾಗಿ ತಾವೇ ಹೋಗುತ್ತಾರೆ. ಹಣದ ಉಳಿತಾಯಕ್ಕಾಗಿಯೇ ಅವರು ಮಾರುಕಟ್ಟೆಗಳಿಗೆ ಧಾವಿಸುತ್ತಾರೆ. ಇದು ಚೆಲ್ಲಾಟವಲ್ಲ. ಬದಲಿಗೆ ಹಣ ಉಳಿಸುವ ಪ್ರವೃತ್ತಿಯಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವ ಮತ್ತು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಈ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದ  ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಕೋವಿಡ್ 19 2ನೇ ಅಲೆ ಇನ್ನೂ ಮುಗಿದಿಲ್ಲ. ಗಿರಿಧಾಮಗಳು ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಕೋವಿಡ್-19 ಮಾನದಂಡಗಳ ಉಲ್ಲಂಘನೆ ಮಾಡಲಾಗುತ್ತಿರುವದನ್ನು ಕೇಂದ್ರ ಗಮನಿಸಿದೆ. ಎಸ್‌ಒಪಿಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವ  ಅಧಿಕಾರಿಗಳ ಈ ನಿರ್ಲಕ್ಷ್ಯತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com