ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅನುಮತಿ: ಧರ್ಮೇಂದ್ರ ಪ್ರಧಾನ್

ಮಹತ್ವದ ಬೆಳವಣಿಗೆಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.
ನೀಟ್ ಪರೀಕ್ಷೆ
ನೀಟ್ ಪರೀಕ್ಷೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.

ಈ ಕುರಿತಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮಾಹಿತಿ ನೀಡಿದ್ದು, 'ಪ್ರಸಕ್ತ ಸಾಲಿನ ನೀಟ್‌ ಅನ್ನು ಕನ್ನಡ, ಪಂಜಾಬ್‌, ಮಲಯಾಳಂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕುವೈತ್‌ನಲ್ಲಿರುವ ಭಾರತೀಯ ಸಮುದಾಯದ ವಿದ್ಯಾರ್ಥಿಗಳಿಗೆ ನೀಟ್‌-ಯುಜಿ ಬರೆಯಲು ಅನುಕೂಲವಾಗುವಂತೆ ಕೇಂದ್ರ ತೆರೆಯಲಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಪ್ರಧಾನ್ ಮಾಹಿತಿ ನೀಡಿದರು.

ನೀಟ್ (ಯುಜಿ) 2021 ಮೊದಲ ಬಾರಿಗೆ 13 ಭಾಷೆಗಳಲ್ಲಿ ಪಂಜಾಬಿ ಮತ್ತು ಮಲಯಾಳಂ ಸೇರ್ಪಡೆಯೊಂದಿಗೆ ನಡೆಯಲಿದೆ. ಹಿಂದಿ, ಪಂಜಾಬಿ, ಅಸ್ಸಾಮೀಸ್, ಬಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲಯಾಳಂ, ಕನ್ನಡ, ತಮಿಳು, ಉರ್ದು ಮತ್ತು ಇಂಗ್ಲಿಷ್ ಭಾಷೆಗಳನ್ನು ಈಗ ನೀಡಲಾಗುತ್ತಿದೆ ಎಂದು  ಪ್ರಧಾನ್ ಹೇಳಿದರು.

ನೀಟ್ (ಯುಜಿ) 2021 ರ ನೋಂದಣಿ ಇಂದು ಸಂಜೆ 5:00 ರಿಂದ http://ntaneet.nic.in ನಲ್ಲಿ ಪ್ರಾರಂಭವಾಗಿದೆ. ನೀಟ್ (ಯುಜಿ) ಪರೀಕ್ಷೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತು ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗುವಂತೆ ಮಧ್ಯಪ್ರಾಚ್ಯದಲ್ಲಿ, ಕುವೈತ್‌ನಲ್ಲಿ ಪರೀಕ್ಷಾ  ಕೇಂದ್ರವನ್ನು ತೆರೆಯಲಾಗಿದೆ. ಸೆ.12ರಂದು ನಡೆಯಲಿರುವ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿ ಆರಂಭಿಸಿದ್ದಾರೆ. ಮತ್ತೂಂದೆಡೆ, ವೈದ್ಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ ಸೆ.12ರಂದು ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಪರೀಕ್ಷೆ ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿರುವ ಅವರು, ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 2020 ರಲ್ಲಿ ಬಳಸಿದ 3,862 ರಿಂದ ಹೆಚ್ಚಿಸಲಾಗುವುದು. 

ಕಳೆದ ವರ್ಷ, ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಠಿಣ ಮುನ್ನೆಚ್ಚರಿಕೆಗಳ ನಡುವೆ ಇದನ್ನು ಸೆಪ್ಟೆಂಬರ್ 13 ರಂದು ನಡೆಸಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com