ಕೇರಳದಲ್ಲಿ ಝಿಕಾ ವೈರಸ್ ನ ಐದು ಹೊಸ ಪ್ರಕರಣ ಪತ್ತೆ; 28ಕ್ಕೆ ಏರಿಕೆ

ಝಿಕಾ ವೈರಸ್ ನ ಕ್ಲಸ್ಟರ್ ನ್ನು ಗುರುತಿಸುವ ನಡುವೆಯೇ ಕೇರಳದಲ್ಲಿ ಮತ್ತೆ 5 ಮಂದಿಗೆ ಝಿಕಾ ವೈರಸ್ ಪತ್ತೆಯಾಗಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ತಿರುವನಂತಪುರಂ: ಝಿಕಾ ವೈರಸ್ ನ ಕ್ಲಸ್ಟರ್ ನ್ನು ಗುರುತಿಸಿರುವುದರ ನಡುವೆಯೇ ಕೇರಳದಲ್ಲಿ ಮತ್ತೆ 5 ಮಂದಿಗೆ ಝಿಕಾ ವೈರಸ್ ಪತ್ತೆಯಾಗಿದೆ. ನಾಲ್ವರು ಮಹಿಳೆಯರು ಸೋಂಕುಗೆ ಗುರಿಯಾಗಿದ್ದು, ರಾಜ್ಯದಲ್ಲಿ ಝಿಕಾ ವೈರಸ್ ಪೀಡಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.

"ಹೊಸ ಪ್ರಕರಣಗಳ ಪೈಕಿ ಇಬ್ಬರು ಇಲ್ಲಿನ ಅನಾಯರಾ ಎಂಬ ಪ್ರದೇಶದವರಾಗಿದ್ದು, ಇಲ್ಲಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಝಿಕಾ ವೈರಸ್ ನ ಕ್ಲಸ್ಟರ್ ನ್ನು ಗುರುತಿಸಲಾಗಿದೆ" ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

ಉಳಿದ ಸೋಂಕಿತರು ಈಸ್ಟ್ ಫೋರ್ಟ್, ಕುನ್ನುಕುಳಿ ಹಾಗೂ ಪಟ್ಟೋಮ್ ನ ನಿವಾಸಿಗಳಾಗಿದ್ದು ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ನಾಲ್ಕು ಮಾದರಿಗಳನ್ನು ಖಾಸಗಿ ಆಸ್ಪತ್ರೆಯಿಂದ ಸಂಗ್ರಹಿಸಿ ಕೊಂಡೊಯ್ಯಲಾಗಿದ್ದರೆ, ಒಂದನ್ನು ಆರೋಗ್ಯ ಇಲಾಖೆ ನಿಗಾ ವಹಿಸಿ ಸಂಗ್ರಹಿಸಿ ಕಳಿಸಿಕೊಟ್ಟಿದೆ. ಇದೇ ವೇಳೆ ಇನ್ನೂ 16 ಮಾದರಿಗಳ ಪರೀಕ್ಷೆ ವರದಿ ನೆಗೆಟೀವ್ ಬಂದಿದ್ದು, ರಾಜ್ಯದಲ್ಲಿ ಒಟ್ಟು ಝಿಕಾ ಪ್ರಕರಣಗಳ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.

ಕ್ಲಸ್ಟರ್ ಪ್ರದೇಶದಲ್ಲಿ ಝೀಕಾ ವೈರಸ್ ಹರಡುವುದನ್ನು ತಡೆಗಟ್ಟಲು ಸೊಳ್ಳೆಗಳ ನಿರ್ನಾಮಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com