ಸಹಾಯಕಿಗೆ ಲೈಂಗಿಕ ಕಿರುಕುಳ: ಥಾಣೆ ಪುರಸಭೆಯ ಕೋವಿಡ್-19 ಆಸ್ಪತ್ರೆಯ ಅಧಿಕಾರಿ ವಿರುದ್ಧ ಪ್ರಕರಣ
ಸಹಾಯಕ ಮಾಟ್ರಾನ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಥಾಣೆಯ ಪುರಸಭೆಯ ಕೋವಿಡ್-19 ಆಸ್ಪತ್ರೆಯ ಹಿರಿಯ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Published: 15th July 2021 11:39 AM | Last Updated: 15th July 2021 01:18 PM | A+A A-

ಸಾಂಕೇತಿಕ ಚಿತ್ರ
ಥಾಣೆ: ಸಹಾಯಕ ಮಾಟ್ರಾನ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಥಾಣೆಯ ಪುರಸಭೆಯ ಕೋವಿಡ್-19 ಆಸ್ಪತ್ರೆಯ ಹಿರಿಯ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗ್ಲೋಬಲ್ ಹಬ್ ಕೋವಿಡ್ ಆಸ್ಪತ್ರೆಯ ಉಸ್ತುವಾರಿಯೂ ಆಗಿರುವ ಆಸ್ಪತ್ರೆಯ ಉಪ ಆಯುಕ್ತ ವಿಶ್ವನಾಥ್ ಕೇಲ್ಕರ್ ವಿರುದ್ಧ ಆರೋಪ ಕೇಳಿಬಂದಿದ್ದು, ಕಪೂರ್ಬಾವ್ಡಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಹಾಯಕ ಮ್ಯಾಟ್ರಾನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಅಧಿಕಾರಿ ತನ್ನನ್ನು ಕಾಮುಕ ದೃಷ್ಟಿಯಿಂದ ನೋಡುತ್ತಿದ್ದರು, ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದೂ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ಆರೋಪ ಮಾಡುತ್ತಿದ್ದಂತೆಯೇ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಪುನಃ ಆಕೆಯನ್ನು ನೇಮಕ ಮಾಡಲಾಗಿದೆ.
ಸಂತ್ರಸ್ತೆ ತನಗಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಪ್ರಸಭೆಯ ಆಯುಕ್ತರಿಗೆ ಹಾಗೂ ಇನ್ನಿತರ ಅಧಿಕಾರಿಗಳಿಗೆ ದೂರು ನೀಡಿದ್ದಾರಾದರೂ ಕೇಲ್ಕರ್ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ರಾಜ್ಯ ಘಟಕದ ಉಪಾಧ್ಯಕ್ಷ ಚಿತ್ರಾ ವಾಘ್ ಪಕ್ಷದ ಥಾಣೆಯ ನಗರ ಮಹಿಳಾ ವಿಭಾಗದ ಪದಾಧಿಕಾರಿಗಳು ಪುರಸಭೆ ಆಯುಕ್ತ ವಿಪಿನ್ ಶರ್ಮಾ ಅವರನ್ನು ಭೇಟಿ ಮಾಡಿ ಸಂತ್ರಸ್ತೆಯ ದೂರಿನ ಬಗ್ಗೆ ವಿವರಿಸಿದ್ದು, ಅಧಿಕಾರಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಥಾಣೆಯ ಪೊಲೀಸ್ ಆಯುಕ್ತ ಜೈ ಜೀತ್ ಸಿಂಗ್ ಅವರನ್ನು ಪದಾಧಿಕಾರಿಗಳು, ಸಂತ್ರಸ್ತೆ ಭೇಟಿ ಮಾಡಿದ ಬಳಿಕ ಕೇಲ್ಕರ್ ವಿರುದ್ಧ ಐಪಿಸಿ ಸೆಕ್ಷನ್ 354 (a) (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಕೇಲ್ಕರ್ ನ್ನು ಈವರೆಗೂ ಬಂಧಿಸಿಲ್ಲ.