2022ರ 3ನೇ ತ್ರೈಮಾಸಿಕ ವೇಳೆಗೆ ಚಂದ್ರಯಾನ-3 ಉಡಾವಣೆ ಸಾಧ್ಯತೆ: ಜಿತೇಂದ್ರ ಸಿಂಗ್

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಮಾನವರಹಿತ ಚಂದ್ರಯಾನ ಮಿಷನ್ ಪ್ರಗತಿಗೆ ಅಡ್ಡಿಯಾಗಿದ್ದು 2022ರ ತ್ರೈಮಾಸಿಕ ವೇಳೆಗೆ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇಸ್ರೋ ಆ್ಯನಿಮೇಷನ್ ಮಾಡಿದ್ದ ಲ್ಯಾಂಡರ್ ವಿಕ್ರಂ ಫೋಟೋ
ಇಸ್ರೋ ಆ್ಯನಿಮೇಷನ್ ಮಾಡಿದ್ದ ಲ್ಯಾಂಡರ್ ವಿಕ್ರಂ ಫೋಟೋ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಮಾನವರಹಿತ ಚಂದ್ರಯಾನ ಮಿಷನ್ ಪ್ರಗತಿಗೆ ಅಡ್ಡಿಯಾಗಿದ್ದು 2022ರ ತ್ರೈಮಾಸಿಕ ವೇಳೆಗೆ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಬಾಹ್ಯಾಕಾಶ ಇಲಾಖೆಯ ಉಸ್ತುವಾರಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು, ಚಂದ್ರಯಾನ-3 ಉಡಾವಣೆಯನ್ನು ಮರು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಇನ್ನು ಮುಂದೆ ಸಾಮಾನ್ಯ ಕೆಲಸದ ಹರಿವನ್ನು ಊಹಿಸಿಕೊಂಡು 2022ರ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ-3 ಅನ್ನು ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಅನ್ಲಾಕ್ ಪ್ರಾರಂಭವಾದ ನಂತರ ಚಂದ್ರಯಾನ-3 ಯೋಜನೆಯ ಕಾರ್ಯಗಳು ಪುನರಾರಂಭಗೊಂಡಿದೆ ಮತ್ತು ಯೋಜನೆ ಪ್ರಬುದ್ಧ ಹಂತದಲ್ಲಿದೆ ಎಂದು ಅವರು ಹೇಳಿದರು.

ವಿನ್ಯಾಸ, ವಿಶ್ಲೇಷಣೆ ಹಾಗೂ ಡಾಕ್ಯುಮೆಂಟೇಷನ್ ಗಳನ್ನು ಇಸ್ರೋ ಮಾಡುತ್ತಿದೆ. ಆದರೆ ಹಾರ್ಡ್ ವೇರ್ ನ್ನು ದೇಶಾದ್ಯಂತ ಇರುವ ಕೈಗಾರಿಕೆಗಳು ಪೂರೈಸುತ್ತಿವೆ ಎಂದು ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com