ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ಮತ್ತು ತಮ್ಮ ಪತಿ ರಾಜ್ ಕುಂದ್ರಾ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿ ತನಿಖೆಗಾಗಿ ಮನೆಗೆ ಕರೆದೊಯ್ದಿದ್ದರು. ಈ ವೇಳೆ ಪೊಲೀಸರನ್ನು ಕಂಡ ಅವರ ಪತ್ನಿ ಶಿಲ್ಪಾ ಶೆಟ್ಟಿ ತೀವ್ರ ಆಕ್ರೋಶಗೊಂಡಿದ್ದರು. ಪತಿ ರಾಜ್ ಕುಂದ್ರಾ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಜೋರು ವಾಗ್ವಾದ ನಡೆಸಿ, ಜಗಳ ಕೂಡ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಕಳೆದ ಜುಲೈ 19ರಂದು ರಾಜ್ ಕುಂದ್ರಾರನ್ನು ಕೆಲ ದಿನಗಳ ಹಿಂದೆ ಅವರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ವಿಚಾರಣೆ ಮಾಡುವ ಸಲುವಾಗಿ ಪೊಲೀಸರು ಅವರ ನಿವಾಸ ಕಿನರಾಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಶಿಲ್ಪಾ ಶೆಟ್ಟಿ ಪತಿಯನ್ನು ಕಂಡು ಗರಂ ಆಗಿದ್ದಾರೆ. ರಾಜ್ ಕುಂದ್ರಾ ಜೊತೆಗೆ ಶಿಲ್ಪಾ ಶೆಟ್ಟಿ ಕೆಟ್ಟದಾಗಿ ವಾಗ್ವಾದ ನಡೆಸಿ, ಜಗಳ ಮಾಡಿದ್ದಾರೆ.
ನಮಗೆ ಎಲ್ಲವೂ ಇತ್ತ.. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದೆವು. ಆರ್ಥಿಕವಾಗಿ ಸಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದೆವು. ಆದಾಗ್ಯೂ ಯಾವುದಕ್ಕಾಗಿ ಇವೆಲ್ಲ ಮಾಡಿದಿರಿ...ನಿಮ್ಮ ಈ ಕೆಲಸದಿಂದ ಕುಟುಂಬದ ಗೌರವ ಹಾಳಾಗಿದೆ. ಉದ್ಯಮದಲ್ಲಿ ಅವರ ತಮಗಿದ್ದ ಪ್ರಾಜೆಕ್ಟ್ ಗಳು, ಜಾಹಿರಾತುಗಳು ರದ್ದಾಗುತ್ತಿವೆ. ಅನೇಕ ಯೋಜನೆಗಳನ್ನು ಕೈ ಬಿಡಬೇಕಾಗಿದೆ ಎಂದು ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ದುಃಖದಿಂದ ಪೊಲೀಸರ ಎದುರೇ ಕುಸಿದುಬಿದ್ದಿದ್ದಾರೆ.
ಶಿಲ್ಪಾ ವಿಚಾರಣೆ ಮಾಡಿದ್ದ ಅಧಿಕಾರಿಗಳು
ಇದೇ ವೇಳೆ ಶಿಲ್ಪಾ ಶೆಟ್ಟಿ ಅವರ ವಿಚಾರಣೆಯನ್ನು ಅಧಿಕಾರಿಗಳು ಮಾಡಿದ್ದರು. ಸುಮಾರು 2 ಗಂಟೆಗಳ ಕಾಲ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದರು. 'ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ರಾಜ್ ಕುಂದ್ರಾ ತಯಾರಿಸಿದ್ದು ಅಶ್ಲೀಲ ಸಿನಿಮಾಗಳಲ್ಲ, ಬರೀ ಕಾಮಪ್ರಚೋದಕ ಸಿನಿಮಾಗಳು ಮಾತ್ರ. ಅವರ ಆಪ್‌ನಲ್ಲಿರುವ ಸಿನಿಮಾಗಳು ಅಶ್ಲೀಲ ಸಿನಿಮಾಗಳಲ್ಲ, ಬದಲಾಗಿ ಇತರ ಓಟಿಟಿ ವೇದಿಕೆಯಲ್ಲಿರುವಂತಹ ಕಾಮಪ್ರಚೋದಕ ಸಿನಿಮಾಗಳಷ್ಟೇ' ಎಂದು ಶಿಲ್ಪಾ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಆದರೆ, ಪೋಲಿಸರು ವಶಪಡಿಸಿಕೊಂಡಿರುವ ಕೆಲ ದಾಖಲೆಗಳಲ್ಲಿ ಶಿಲ್ಪಾ ಅವರ ಸಹಿ ಕೂಡ ಇರುವುದು ಪತ್ತೆಯಾಗಿದೆ. ಹಾಗಾಗಿ, ಅವರನ್ನು ಇನ್ನೊಮ್ಮೆ ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಇನ್ನು, ಅಂಧೇರಿ ಪ್ರಾಂತ್ಯದಲ್ಲಿರುವ ರಾಜ್ ಕುಂದ್ರಾ ಅವರ ಕಚೇರಿ ಮೇಲೆ ದಾಳಿ ಮಾಡಿದಾಗ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳಿಗೆ ಒಂದು ರಹಸ್ಯ ಬೀರು ಸಿಕ್ಕಿದೆ. ಸದ್ಯ ಈ ಬೀರುವಿನಲ್ಲಿ ಏನಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ.
Advertisement