ರಸ್ತೆ ದಾಟಿದ 3000ಕ್ಕೂ ಹೆಚ್ಚು ಕೃಷ್ಣಮೃಗಗಳು, 'ಎಕ್ಸಲೆಂಟ್' ಎಂದ ಪ್ರಧಾನಿ ಮೋದಿ

ಗುಜರಾತಿನ ಕೃಷ್ಣಮೃಗ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಂಡು ಹಿಂಡಾಗಿ ಕೃಷ್ಣಮೃಗಗಳನ್ನು ರಸ್ತೆ ದಾಟುತ್ತಿರುವ ವಿಡಿಯೊ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ರಸ್ತೆ ದಾಟುತ್ತಿರುವ ಕೃಷ್ಣಮೃಗಗಳು
ರಸ್ತೆ ದಾಟುತ್ತಿರುವ ಕೃಷ್ಣಮೃಗಗಳು

ಅಹಮದಾಬಾದ್: ಗುಜರಾತಿನ ಕೃಷ್ಣಮೃಗ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಂಡು ಹಿಂಡಾಗಿ ಕೃಷ್ಣಮೃಗಗಳನ್ನು ರಸ್ತೆ ದಾಟುತ್ತಿರುವ ವಿಡಿಯೊ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಈ ವಿಡಿಯೋಗೆ ಪ್ರಧಾನಿ ಮೋದಿ 'ಎಕ್ಸಲೆಂಟ್' ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಗುಜರಾತಿನ ಭಾವನಗರದ ಕೃಷ್ಣ ಮೃಗಗಳ ರಾಷ್ಟ್ರೀಯ ಉದ್ಯಾನದಲ್ಲಿ 3000 ಕ್ಕೂ ಹೆಚ್ಚು ಕೃಷ್ಣ ಮೃಗಗಳು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಗುಜರಾತ್ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಈ ವಿಡಿಯೋವನ್ನು ನೋಡಿದ ಪ್ರಧಾನಿ ಮೋದಿ  'ಎಕ್ಸಲೆಂಟ್' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ ಈ ಟ್ವೀಟ್ ಅನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ರೀಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com