ಕೋವಿಡ್ ಸೋಂಕಿತರ ಆಕ್ಸಿಜನ್ ಪೈಪ್ ಕಟ್ ಮಾಡಿದ ಆ್ಯಂಬುಲೆನ್ಸ್ ಚಾಲಕನಿಗೆ ಪೊಲೀಸರ ಥಳಿತ: ವಿಡಿಯೋ ಹಿಂದಿನ ಸತ್ಯಾಸತ್ಯತೆ ಬಯಲು!

ಆಸ್ಪತ್ರೆಯೊಂದರಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಪೈಪ್ ಅನ್ನು ಆ್ಯಂಬುಲೆನ್ಸ್ ಚಾಲಕ ಕಟ್ ಮಾಡಿದ ಆರೋಪದ ಮೇಲೆ ಪೊಲೀಸರು ಥಳಿಸುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಸುದ್ದಿ ಸುಳ್ಳುಸುದ್ದಿಯಾಗಿದ್ದು, ವಿಡಿಯೋ ಹಿಂದಿನ ಸತ್ಯಾಸತ್ಯತೆ ಬಟಾಬಯಲಾಗಿದೆ.
ವೈರಲ್ ವಿಡಿಯೋ
ವೈರಲ್ ವಿಡಿಯೋ

ನವದೆಹಲಿ: ಆಸ್ಪತ್ರೆಯೊಂದರಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಪೈಪ್ ಅನ್ನು ಆ್ಯಂಬುಲೆನ್ಸ್ ಚಾಲಕ ಕಟ್ ಮಾಡಿದ ಆರೋಪದ ಮೇಲೆ ಪೊಲೀಸರು ಥಳಿಸುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಸುದ್ದಿ ಸುಳ್ಳುಸುದ್ದಿಯಾಗಿದ್ದು, ವಿಡಿಯೋ ಹಿಂದಿನ ಸತ್ಯಾಸತ್ಯತೆ  ಬಟಾಬಯಲಾಗಿದೆ.

ಹೌದು.. ಕಳೆದೊಂದು ವಾರದಿಂದ ಸಾಮಾಜಿಕ ಜಾಲಣಗಳಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ತೆಲಂಗಾಣದ ನಿಜಾಮಾಬಾದ್ ಹೈದ್ರಾಬಾದ್ ಹಾಸ್ಪಿಟಲ್ ಆಸ್ಪತ್ರೆಯಲ್ಲಿ ಥಳಿಸುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಪೈಪ್ ಅನ್ನು ಆ್ಯಂಬುಲೆನ್ಸ್  ಚಾಲಕ ಕಟ್ ಮಾಡಿ ಸೋಂಕಿತರ ಪ್ರಾಣಕ್ಕೆ ಕುತ್ತು ತಂದಿದ್ದ. ಹೀಗಾಗಿ ಪೊಲೀಸರು ಆತನನ್ನು ಥಳಿಸಿದ್ದಾರೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. 

ಈ ವಿಡಿಯೋ ವ್ಯಾಪಕ ವೈರಲ್ ಕೂಡ ಆಗಿತ್ತು. ಆದರೆ ಫೇಕ್ ನ್ಯೂಸ್ ವೈರಲ್ ವಿಡಿಯೋಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ವೆಬ್ ಸೈಟ್ ವೊಂದು ಈ ವಿಡಿಯೋ ಹಿಂದಿನ ಸತ್ಯಾಸತ್ಯತೆಯನ್ನು ಬಯಲಿಗೆಳದಿದ್ದು, ಇದು ನಕಲಿ ಸುದ್ದಿ ಎಂದು ಹೇಳಿದೆ.

ವಿಡಿಯೋದ ಅಸಲೀಯತ್ತು ಏನು?
ಇನ್ನು ಈ ವಿಡಿಯೋದ ಅಸಲೀಯತ್ತನ್ನೂ ಕೂಡ ವೆಬ್ ಸೈಟ್ ಬಯಲಿಗೆಳೆದಿದ್ದು, ಇದು ತೆಲಂಗಾಣದ ನಿಜಾಮಾಬಾದ್ ಆಸ್ಪತ್ರೆಯಲ್ಲ. ಬದಲಿಗೆ ಮಹಾರಾಷ್ಟ್ರದ ಜಲ್ನಾದ ದೀಪಕ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದಾಗಿದೆ. ವಿಡಿಯೋದಲ್ಲಿರುವುದು ಆ್ಯಂಬುಲೆನ್ಸ್ ಚಾಲಕನಲ್ಲ. ಬದಲಿಗೆ ಆಸ್ಪತ್ರೆಯ ಜಗಳ ಮಾಡಿದ್ದ  ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವರಾಜ್ ನರಿಯಾಲ್ವಾಲೆ ಎಂದು ಹೇಳಿದೆ.

ಆಸ್ಪತ್ರೆಯಲ್ಲಿ ರೊಗಿಯೊಬ್ಬರು ತೀರಿಕೊಂಡಾಗ ವೈದ್ಯರ ನಿರ್ಲಕ್ಷ್ಯ ಆರೋಪ ಹೊರಿಸಿದ್ದ ಶಿವರಾಜ್ ನರಿಯಾಲ್ವಾಲೆ ತನ್ನ ಬೆಂಬಲಿಗರೊಂದಿಗೆ ಆಸ್ಪತ್ರೆಗೆ ಬಂದು ದಾಂಧಲೆ ನಡೆಸಿದ್ದ. ವಿಚಾರ ತಿಳಿದ ಕೂಡಲೇ  ಸ್ಥಳಕ್ಕಾಗಮಿಸಿದ್ದ ಪೊಲೀಸರು ಸ್ಥಳದಲ್ಲೇ ಆತನನ್ನು ಥಳಿಸಿದ್ದರು.

ಆದರೆ ಇದೇ ವಿಡಿಯೋವನ್ನು ಕಿಡಿಕೇಡಿಗಳು ಸತ್ಯಾಸತ್ಯತೆಯನ್ನು ತಿರುಚಿ ಹರಿಯಬಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com