'ಸಾರ್ವಜನಿಕ ಸೇವೆ ವಿರುದ್ಧ ಪ್ರತಿಷ್ಠೆಯ ಮೇಲುಗೈ': ಪ್ರಧಾನಿ ಸಭೆಗೆ ಮಮತಾ ಗೈರು ಕುರಿತು ರಾಜ್ಯಪಾಲ ಧಂಕರ್ ಕಿಡಿ

ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಿಂದ ಹೊರಗುಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತಂತೆ 'ಸಾರ್ವಜನಿಕ ಸೇವೆ ವಿರುದ್ಧ ಪ್ರತಿಷ್ಠೆ ಮೇಲುಗೈ ಸಾಧಿಸಿತು' ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮಂಗಳವಾರ ಹೇಳುವ ಮೂಲಕ ಹೊಸ ವಿವಾದವನ್ನು ಉಂಟು ಮಾಡಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್

ಕೊಲ್ಕತ್ತಾ:  ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಿಂದ ಹೊರಗುಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕುರಿತಂತೆ 'ಸಾರ್ವಜನಿಕ ಸೇವೆ ವಿರುದ್ಧ ಪ್ರತಿಷ್ಠೆ ಮೇಲುಗೈ ಸಾಧಿಸಿತು' ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮಂಗಳವಾರ ಹೇಳುವ ಮೂಲಕ ಹೊಸ ವಿವಾದವನ್ನು ಉಂಟು ಮಾಡಿದ್ದಾರೆ.

ರಾಜ್ಯಪಾಲರ ಹೇಳಿಕೆ ದುರದೃಷ್ಟಕರ ಎಂದು ಹೇಳಿರುವ ಆಡಳಿತರೂಢ ಟಿಎಂಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾರದ 24 ಗಂಟೆಯೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಎಲ್ಲಾ ಕಾರ್ಯಗಳು ರಾಜ್ಯದ ಹಿತಾಸಕ್ತಿಗಳ ಬಗೆಗಿನ ಕಾಳಜಿಯಿಂದ ಪ್ರೇರೇಪಿಸಲ್ಪಡುತ್ತವೆ ಎಂದು ಸಮರ್ಥಿಸಿಕೊಂಡಿದೆ.

ಸುವೇಂದು ಅಧಿಕಾರಿ ಪಾಲ್ಗೊಂಡರೆ ನಾನು ಪಾಲ್ಗೊಳ್ಳುವುದಿಲ್ಲ ಎಂದು ಮಿಡ್ನಾಪುರ ಡಿಲ್ಲೆಯ ಕಲೈಕುಂಡಾದಲ್ಲಿನ ಸಭೆಗೂ ಮುಂಚಿತವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ಮಾಡಿದ್ದರು. ಮೇ 27 ರಂದು 11-16ಕ್ಕೆ ಮುಖ್ಯಮಂತ್ರಿ ಮಮತಾ ಕಚೇರಿಯಿಂದ ಮಾತನಾಡಬಹುದೇ? ಅರ್ಜೆಂಟ್ ಎಂಬ ಸಂದೇಶ ಬಂದಿತ್ತು ಎಂದು ಧಂಕರ್ ಟ್ವೀಟ್ ಮಾಡಿದ್ದಾರೆ.

ತದನಂತರ ಒಂದು ವೇಳೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪಾಲ್ಗೊಂಡರೆ ಯಾಸ್ ಚಂಡಮಾರುತದ 
ಪರಿಣಾಮ ಕುರಿತ ಪ್ರಧಾನಿಯ ಪರಾಮರ್ಶನಾ ಸಭೆಯನ್ನು ಬಹಿಷ್ಕರಿಸುವುದಾಗಿ ಫೋನ್ ನಲ್ಲಿ ಹೇಳಲಾಗಿತ್ತು. ಸಾರ್ವಜನಿಕ
ಸೇವೆ ವಿರುದ್ಧ ಪ್ರತಿಷ್ಠೆ ಮೇಲುಗೈ ಸಾಧಿಸಿದೆ ಎಂದು ಧಂಕರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಧಂಕರ್, ಸುವೇಂದು ಅಧಿಕಾರಿ ಅಲ್ಲದೇ, ಬಿಜೆಪಿ ಸಂಸದ ದೆಬಾಶ್ರಿ ಚೌದರಿ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ- ಸಿಎಂ
ಸಭೆಯಲ್ಲಿ ಸುವೇಂದು ಅಧಿಕಾರಿ ಪಾಲ್ಗೊಂಡಿದ್ದರಿಂದ ಸಭೆಯಿಂದ ಹೊರಗುಳಿದಿದ್ದಾಗಿ ಮಮತಾ ಬ್ಯಾನರ್ಜಿ ಹೇಳಿದ್ದರು. ಇತ್ತೀಚಿಗೆ
ನಡೆದ ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com