ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯಿಂದ 19 ಲಕ್ಷ ರೂ. ಬಿಲ್: ಜಿಲ್ಲಾಧಿಕಾರಿ ಮೊರೆ ಹೋದ ಕುಟುಂಬ

ತಮಿಳುನಾಡಿನ ಕೋವಿಡ್-19 ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಖಾಸಗಿ ಆಸ್ಪತ್ರೆ 19 ಲಕ್ಷ ಬಿಲ್ ನೀಡಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ತಿರುಪ್ಪುರ್: ಕೋವಿಡ್-19 ಸೋಂಕು ತಗುಲಿದರೆ ಜೀವ ಉಳಿಯುತ್ತದೆಯೋ ಇಲ್ಲವೋ ಎಂಬ ಚಿಂತೆಯ ಜೊತೆಗೆ ಆರ್ಥಿಕ ಪರಿಸ್ಥಿತಿಗಳೂ ಮನುಷ್ಯರನ್ನು ಕುಗ್ಗುವಂತೆ ಮಾಡುತ್ತಿದೆ. ತಮಿಳುನಾಡಿನ ಕೋವಿಡ್-19 ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಖಾಸಗಿ ಆಸ್ಪತ್ರೆ 19 ಲಕ್ಷ ರೂ. ಬಿಲ್ ನೀಡಿದೆ. 

ತಿರುಪ್ಪುರ್ ನ ಕಣ್ಣಕಪಾಳಯಂ ನ ನಿವಾಸಿ ಎಂ ಸುಬ್ರಹ್ಮಣಿಯಮ್ (62) ಎಂಬುವವರಿಗೆ ಕೋವಿಡ್-19 ಸೋಂಕು ದೃಢಪಟ್ಟ ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 23 ದಿನಗಳ ನಂತರ ಮೇ.25 ರಂದು ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದರು. ಕುಟುಂಬ ಸದಸ್ಯರಿಗೆ ಸದಸ್ಯನನ್ನು ಕಳೆದುಕೊಳ್ಳುವ ನೋವಿನ ಜೊತೆಗೆ ಖಾಸಗಿ ಆಸ್ಪತ್ರೆ 19 ಲಕ್ಷ ರೂ. ಚಿಕಿತ್ಸಾ ಶುಲ್ಕ ಬಿಲ್ ಕಳಿಸಿರುವುದು ಮತ್ತೊಂದು ಆಘಾತ ಉಂಟಾಗಿದೆ. ಸುಬ್ರಹ್ಮಣಿಯನ್ ಅವರ ಇಬ್ಬರು ಮಕ್ಕಳು ಹರಿಕೃಷ್ಣನ್ ಹಾಗೂ ಕಾರ್ತಿಕೇಯನ್ ಆಸ್ಪತ್ರೆಯ ಶುಲ್ಕವನ್ನು ಪ್ರಶ್ನಿಸಿ ತಿರುಪ್ಪುರ್ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಕೋವಿಡ್-19 ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಸುಬ್ರಹ್ಮಣಿಯನ್ ಅವರನ್ನು ಪೆರುಮನಲ್ಲೂರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವ ವೇಳೆ ಅವರಿಗೆ ಪ್ರಾರಂಭಿಕ ಹಂತದ ಸೋಂಕು ಇತ್ತು. 5 ದಿನಗಳ ನಂತರ ರೋಗಿಯ ಪರಿಸ್ಥಿತಿ ಹದಗೆಟ್ಟಿತು. ಆ ನಂತರ ಐಸಿಯುಗೆ ದಾಖಲಿಸಲಾಯಿತು. ಈ ಹಂತದಲ್ಲಿ ವೈದ್ಯರು ರೆಮ್ಡಿಸಿವಿರ್ ನೀಡಬೇಕೆಂದು ಹೇಳಿದರು, ಪ್ರತಿ ಡೋಸ್ ಗೆ 40,000 ರೂಪಾಯಿಗಳ ಶುಲ್ಕ ವಿಧಿಸಿದ ಪರಿಣಾಮ ಕುಟುಂಬ ಸದಸ್ಯರಿಂದ 2 ಲಕ್ಷ ರೂಪಾಯಿ ಪಾವತಿ ಮಾಡಿದರು. 

ರೆಮ್ಡಿಸಿವಿರ್ ಇಂಜೆಕ್ಷನ್ ನೀಡಿದ ಬಳಿಕ ಸುಬ್ರಹ್ಮಣಿಯನ್ ಆರೋಗ್ಯ ಆಕ್ಸಿಜನ್ ಸಪೋರ್ಟ್ ಮೂಲಕ ಸುಧಾರಿಸಿತು, ಆರೋಗ್ಯ ಸುಧಾರಿಸಿದರೆ ಆತನನ್ನು ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಮೇ.24 ರಂದು ಸುಬ್ರಹ್ಮಣಿಯನ್ ಅವರು ಮಕ್ಕಳೊಂದಿಗೆ ಮಾತನಾಡಿ ತನಗೆ ಉಸಿರಾಟದ ಸಮಸ್ಯೆ ಇದೆ ಎಂದು ಹೇಳಿದ್ದರು. ತಕ್ಷಣವೇ ವೈದ್ಯರು ಆಕ್ಸಿಜನ್ ಪೂರೈಜೆ ಕೊರತೆ ಇದೆ ಮೂರು ಗಂಟೆಗಳ ಒಳಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಿದ್ದರು. ವೈದ್ಯರ ಸೂಚನೆಯಂತೆಯೇ ರೋಗಿಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಸ ಆಸ್ಪತ್ರೆಯಲ್ಲಿ ನಾನ್-ಇನ್ವಾಸೀವ್ ವೆಂಟಿಲೇಷನ್ ಇಲ್ಲದ ಕಾರಣ ಮರುದಿನ ಸುಬ್ರಹ್ಮಣಿಯನ್ ಸಾವನ್ನಪ್ಪಿದರು. ಕುಟುಂಬ ಸದಸ್ಯರಿಗೆ ಈ ಆಘಾತದ ನಡುವೆ ಈ ಹಿಂದೆ ಸೇರಿಸಲಾಗಿದ್ದ ಆಸ್ಪತ್ರೆ ಯಾವುದೇ ರಶೀದಿ ನೀಡದೇ 19 ಲಕ್ಷ ರೂ. ಚಿಕಿತ್ಸಾ ಶುಲ್ಕ ವಿಧಿಸಿರುವುದು ಮತ್ತೊಂದು ಆಘಾತವಾಗಿ ಎದುರಾಗಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಸ್ಪತ್ರೆಯನ್ನು ಸಂಪರ್ಕಿಸಲು ಯತ್ನಿಸಿತಾದರೂ ಪ್ರತಿಕ್ರಿಯೆ ನೀಡಲು ಆಸ್ಪತ್ರೆ ನಿರಾಕರಿಸಿದೆ. ಜಿಲ್ಲಾಧಿಕಾರಿ ಕೆ.ವಿಜಯ ಕಾರ್ತಿಕೇಯನ್ ಈ ಬಗ್ಗೆ ಮಾಹಿತಿ ನೀಡಿದ್ದು, "ಆಸ್ಪತ್ರೆಯ ಶುಲ್ಕದ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕರಿಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com