2 ನೇ ಡೋಸ್ ಕೋವ್ಯಾಕ್ಸಿನ್ ಲಭ್ಯವಿಲ್ಲದ ಮೇಲೆ ಲಸಿಕೆ ಕೇಂದ್ರಗಳಿಗೆ ಅಬ್ಬರದಿಂದ ಚಾಲನೆ ನೀಡಿದ್ದೇಕೆ?: ದೆಹಲಿ ಹೈಕೋರ್ಟ್

ಕೋವ್ಯಾಕ್ಸಿನ್ ಅಲಭ್ಯತೆ ಬಗ್ಗೆ ದೆಹಲಿ ಸರ್ಕಾರವನ್ನು ಪ್ರಶ್ನಿಸಿದ್ದು, ನಿಗದಿತ ಸಮಯದಲ್ಲಿ ಜನತೆಗೆ ಎರಡೂ ಡೋಸ್ ಗಳ ಕೋವ್ಯಾಕ್ಸಿನ್ ಲಸಿಕೆಯನ್ನು ಖಾತ್ರಿಪಡಿಸಿಕೊಳ್ಳಲಾಗದ ಮೇಲೆ ಕೇಂದ್ರಗಳನ್ನು ಆತುರಾತುರವಾಗಿ, ತೆರೆದಿದ್ದೇಕೆ? ಎಂದು ಕೇಳಿದೆ.
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ನವದೆಹಲಿ: ಕೋವ್ಯಾಕ್ಸಿನ್ ಅಲಭ್ಯತೆ ಬಗ್ಗೆ ದೆಹಲಿ ಸರ್ಕಾರವನ್ನು ಪ್ರಶ್ನಿಸಿದ್ದು, ನಿಗದಿತ ಸಮಯದಲ್ಲಿ ಜನತೆಗೆ ಎರಡೂ ಡೋಸ್ ಗಳ ಕೋವ್ಯಾಕ್ಸಿನ್ ಲಸಿಕೆಯನ್ನು ಖಾತ್ರಿಪಡಿಸಿಕೊಳ್ಳಲಾಗದ ಮೇಲೆ ಕೇಂದ್ರಗಳನ್ನು ಆತುರಾತುರವಾಗಿ, ತೆರೆದಿದ್ದೇಕೆ? ಎಂದು ಕೇಳಿದೆ.

ನ್ಯಾ. ರೇಖಾ ಪಳ್ಳಿ ದೆಹಲಿ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದ್ದು 6 ವಾರಗಳ ಒಳಗೆ ಕೋವ್ಯಾಕ್ಸಿನ್ ನ ಎರಡನೇ ಡೋಸ್ ನ್ನು ನೀಡುವುದಕ್ಕೆ ಸಾಧ್ಯವೋ ಇಲ್ಲವೋ ಎಂಬ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಸೂಚನೆ ನೀಡಿದೆ. 

ಕೋವ್ಯಾಕ್ಸಿನ್ ನ ಮೊದಲನೇ ಡೋಸ್ ಪಡೆದ 6 ವಾರಗಳ ಅವಧಿಯ ಒಳಗಾಗಿ ಎರಡನೇ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ ಗಳನ್ನು ನೀಡುವುದಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಕೇಂದ್ರಕ್ಕೆ ನೊಟೋಸ್ ಜಾರಿಗೊಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com