ವಾಟ್ಸಾಪ್ 'ಮೋಸದ ಒಪ್ಪಿಗೆ' ಪಡೆದು ಬಳಕೆದಾರ ವಿರೋಧಿ ಅಭ್ಯಾಸದಲ್ಲಿ ತೊಡಗಿದೆ : ಹೈಕೋರ್ಟ್ ಗೆ ಕೇಂದ್ರ ಅಫಿಡವಿಟ್

ಕೇಂದ್ರ ಸರ್ಕಾರ ಗುರುವಾರ ದೆಹಲಿ ನ್ಯಾಯಾಲಯಕ್ಕೆ ಹೊಸದಾಗಿ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು, ವಾಟ್ಸಾಪ್ ಹೊಸ ಖಾಸಗಿತನ ನೀತಿಗಾಗಿ 'ಮೋಸದ ಒಪ್ಪಿಗೆ' ಪಡೆಯುವ ಮೂಲಕ 'ಬಳಕೆದಾರ ವಿರೋಧಿ ಅಭ್ಯಾಸಗಳಲ್ಲಿ ತೊಡಗಿದೆಎಂದು ಹೇಳಿದೆ.
ವಾಟ್ಸಾಪ್
ವಾಟ್ಸಾಪ್

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ದೆಹಲಿ ನ್ಯಾಯಾಲಯಕ್ಕೆ ಹೊಸದಾಗಿ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು, ವಾಟ್ಸಾಪ್  ಹೊಸ ಖಾಸಗಿತನ ನೀತಿಗಾಗಿ 'ಮೋಸದ ಒಪ್ಪಿಗೆ' ಪಡೆಯುವ ಮೂಲಕ 'ಬಳಕೆದಾರ ವಿರೋಧಿ ಅಭ್ಯಾಸಗಳಲ್ಲಿ ತೊಡಗಿದೆ
ಎಂದು ಹೇಳಿದೆ.

ವಾಟ್ಸಾಪ್ ತನ್ನ ಡಿಜಿಟಲ್ ಕೌಶಲ್ಯವನ್ನು ಅನುಮಾನಾಸ್ಪದ ಬಳಕೆದಾರರಿಗೆ ಬಿಟ್ಟಿದ್ದು, ನಿಯಮಿತ ಮಧ್ಯಂತರದಲ್ಲಿ ಸಂಕ್ಷಿಪ್ತ ಅಧಿಸೂಚನೆಯಿಂದ 2021ರ ಹೊಸ ಖಾಸಗಿತನ ನೀತಿಯನ್ನು ಅಳವಡಿಸಿಕೊಳ್ಳುವಂತೆ ಅವರನ್ನು ಒತ್ತಾಸಲು ಬಯಸಿದೆ ಎಂದು ದೆಹಲಿ ಹೈಕೋರ್ಟ್ ಮುಂದೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಗೇಮ್ ಪ್ಲಾನ್ ತುಂಬಾ ಸ್ಪಷ್ಟವಾಗಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಸಂಪೂರ್ಣ ಅಸ್ತಿತ್ವದಲ್ಲಿರುವ ಬಳಕೆದಾರರ ನೆಲೆಯನ್ನು ವರ್ಗಾಯಿಸಲು ಉದ್ದೇಶಿಸಿದೆ. ವೈಯಕ್ತಿಕ ಡೇಟಾ ಸಂರಕ್ಷಣೆ (ಪಿಡಿಪಿ) ಮಸೂದೆ ಕಾನೂನಾಗುವ ಮೊದಲು ನವೀಕರಿಸಿದ ಗೌಪ್ಯತೆ ನೀತಿಗೆ ಬದ್ಧವಾಗಿದೆ ಎಂದು ತಿಳಿಸಿದೆ.

ಪ್ರಸ್ತುತದಲ್ಲಿನ ನೋಟಿಫಿಕೇಷನ್ ನ್ನು ಕೂಡಾ ಕೇಂದ್ರ ಸರ್ಕಾರ ಸಲ್ಲಿಸಿದ್ದು, ಈಗ ಇರುವ ಅಥವಾ ಹೊಸ ಅಧಿಸೂಚನೆಯನ್ನು ಬಳಕೆದಾರರು ತಳ್ಳಿಹಾಕುವಂತೆ ವಾಟ್ಸಾಪ್ ಮಾಡಿದೆ. ಇದು ಮಾರ್ಚ್ 21 ರಂದು ಭಾರತದ ಸ್ಪರ್ಧಾ ಆಯೋಗ ನೀಡಿದ್ದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಸ್ತಿತ್ವದಲ್ಲಿರುವ ಬಳಕೆದಾರರ ನವೀಕರಿಸಲಾದ ವೈಯುಕ್ತಿಕ ನೀತಿಗೆ ಸಂಬಂಧಿಸಿದ ನೋಟಿಫಿಕೇಷನ್ ನ್ನು ತಳ್ಳಿ ಹಾಕುವಂತಹ ಯಾವುದೇ ಕ್ರಮ ಕೈಗೊಳ್ಳದಂತೆ ವಾಟ್ಸಾಪ್ ಗೆ ಮಧ್ಯಂತರ ಆದೇಶ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನ್ಯಾಯಾಲಯ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com