ಕೆಲ ಸಡಿಲತೆಯೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ

ಕೋವಿಡ್-19 ಸೋಂಕು ಇಳಿದಿರುವ  ಜಿಲ್ಲೆಗಳಲ್ಲಿ ಕೆಲ ಸಡಿಲತೆಯೊಂದಿಗೆ ಮತ್ತು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿರ್ಬಂಧಗಳೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಆರೋಗ್ಯ ಕಾರ್ಯಕರ್ತರು ತಪಾಸಣೆ ಮಾಡುತ್ತಿರುವ ಚಿತ್ರ
ಆರೋಗ್ಯ ಕಾರ್ಯಕರ್ತರು ತಪಾಸಣೆ ಮಾಡುತ್ತಿರುವ ಚಿತ್ರ

ಚೆನ್ನೈ: ಕೋವಿಡ್-19 ಸೋಂಕು ಇಳಿದಿರುವ  ಜಿಲ್ಲೆಗಳಲ್ಲಿ ಕೆಲ ಸಡಿಲತೆಯೊಂದಿಗೆ ಮತ್ತು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿರ್ಬಂಧಗಳೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಾಂಕ್ರಾಮಿಕ ತಡೆಯಲ್ಲಿನ ಪ್ರಗತಿ ಕುರಿತಂತೆ ಪರಾಮರ್ಶೆ ನಡೆಸಲಾಯಿತು.

ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು, ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ಮುಖ್ಯಮಂತ್ರಿ ಔಪಚಾರಿಕವಾಗಿ ಲಾಕ್ ಡೌನ್ ವಿಸ್ತರಣೆಯನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಚೆನ್ನೈನಲ್ಲಿ ಪರಿಸ್ಥಿತಿ ಇದೀಗ ಸುಧಾರಣೆಯಾಗಿದ್ದರೆ ರಾಜ್ಯದ ಪೂರ್ವ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬರುತ್ತಿವೆ. ಮೇ 24ರಿಂದ ತೀವ್ರ ನಿರ್ಬಂಧಗಳೊಂದಿಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲಿದ್ದು, ಅದು ಮೇ 31 ರವರೆಗೂ ವಿಸ್ತರಣೆಯಾಗಿದೆ. ಇದನ್ನು ಮತ್ತೆ ಒಂದು ವಾರ ವಿಸ್ತರಿಸಲಾಗುತ್ತಿದೆ. 

ಈ ಅವಧಿಯಲ್ಲಿ ದಿನಸಿ, ತರಕಾರಿ ಮತ್ತು ಮಾಂಸದ ಅಂಗಡಿಗಳಿಗೂ ಬಂದ್ ಆಗಿವೆ. ಆದಾಗ್ಯೂ, ತರಕಾರಿ , ಹಣ್ಣುಗಳ ಪೂರೈಕೆಗೆ ಸರ್ಕಾರ ವ್ಯವಸ್ಥೆ ಮಾಡಿದೆ. ಟೆಲಿಫೋನ್ ನಲ್ಲಿ ಜನರು ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ದಿನಸಿಯನ್ನು ತಲುಪಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com