ಟೀ ಶರ್ಟ್, ಜೀನ್ಸ್ ಧರಿಸಿ ಕಚೇರಿಗೆ ಬರಬೇಡಿ: ಸಿಬ್ಬಂದಿಗಳಿಗೆ ಸಿಬಿಐ ಕಟ್ಟುನಿಟ್ಟಿನ ಆದೇಶ

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೊರಡಿಸಿದ ಹೊಸ ಆದೇಶದನ್ವಯ ತನಿಖಾ ಏಜೆನ್ಸಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನು ಮುಂದೆ ಕೇವಲ ಫಾರ್ಮಲ್ಸ್ ಗಳನ್ನು ಮಾತ್ರವೇ ಧರಿಸಿ ಕಚೇರಿಗೆ ಆಗಮಿಸಬೇಕು. 
ಸಿಬಿಐ
ಸಿಬಿಐ

ನವದೆಹಲಿ: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೊರಡಿಸಿದ ಹೊಸ ಆದೇಶದನ್ವಯ ತನಿಖಾ ಏಜೆನ್ಸಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನು ಮುಂದೆ ಕೇವಲ ಫಾರ್ಮಲ್ಸ್ ಗಳನ್ನು ಮಾತ್ರವೇ ಧರಿಸಿ ಕಚೇರಿಗೆ ಆಗಮಿಸಬೇಕು. 

ಜೀನ್ಸ್ ಮತ್ತು ಸ್ಪೋರ್ಟ್ಸ್ ಶೂ, ಟೀ ಶರ್ಟ್ ಗಳಂತಹಾ ಕ್ಯಾಶುಯಲ್ ಉಡುಗೆಗಳನ್ನು ಧರಿಸುವಂತಿಲ್ಲ.

ಆದೇಶದ ಪ್ರಕಾರ, ಪುರುಷರ ಡ್ರೆಸ್ ಕೋಡ್ ಶರ್ಟ್, ಫಾರ್ಮಲ್ ಪ್ಯಾಂಟ್ ಮತ್ತು ಫಾರ್ಮಲ್ ಶೂಗಳಾಗಿರುತ್ತದೆ. ಅವರು ಸರಿಯಾಗಿ ಕ್ಷೌರ ಮಾಡಿಕೊಂಡು ಕಚೇರಿಗೆ ಬರಬೇಕಾಗುತ್ತದೆ. 

ಸಿಬಿಐನ ಮಹಿಳಾ ಉದ್ಯೋಗಿಗಳಿಗೆ ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸಲು ಹೇಳಲಾಗಿದೆ. "ಯಾವುದೇ ಜೀನ್ಸ್,, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳು, ಚಪ್ಪಲಿಗಳು, ಜಾಹೀರಾತುಗಳುಳ್ಳ ಕ್ಯಾಶುಯಲ್ ಉಡುಪನ್ನು ಕಚೇರಿಗಳಿಗೆ ಧರಿಸಿ ಬರುವುದನ್ನು ಅನುಮತಿಸುವುದಿಲ್ಲ" ಎಂದು ಆದೇಶ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com