ಮೆಹುಲ್ ಚೋಕ್ಸಿಯನ್ನು ಕರೆತರಲು ಡೊಮಿನಿಕಾಗೆ ತೆರಳಿದ್ದ ಭಾರತೀಯ ತಂಡ ಬರಿಗೈಯಲ್ಲಿ ವಾಪಸ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಕರೆತರಲು ಡೊಮಿನಿಕಾಗೆ ತೆರಳಿದ್ದ ಭಾರತೀಯ ತಂಡ ಬರಿಗೈಯಲ್ಲಿ ವಾಪಸಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಕರೆತರಲು ಡೊಮಿನಿಕಾಗೆ ತೆರಳಿದ್ದ ಭಾರತೀಯ ತಂಡ ಬರಿಗೈಯಲ್ಲಿ ವಾಪಸಾಗಿದೆ. 

ಮೇ 23ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಚೋಕ್ಸಿಯನ್ನು ನೆರೆಯ ದ್ವೀಪ ದೇಶ ಡೊಮಿನಿಕಾದಲ್ಲಿ ಪೊಲೀಸರು ಬಂಧಿಸಿದ್ದರು. ಅಕ್ರಮವಾಗಿ ನುಸುಳಿದ್ದ ಆರೋಪದಡಿ ಡೊಮಿನಿಕಾ ಕೋರ್ಟ್ ಚೋಕ್ಸಿಗೆ ಜಾಮೀನು ನೀಡಲು ನಿರಾಕರಿಸಿತ್ತು. 

ಅಲ್ಲದೆ ಡೊಮಿನಿಕಾ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದು ಇನ್ನು ಕನಿಷ್ಠ 1 ತಿಂಗಳ ಕಾಲ ಚೋಕ್ಸಿ ಡೊಮಿನಿಕಾದಲ್ಲೇ ಉಳಿಯಬೇಕಿದೆ. ಹೀಗಾಗಿ ಸಿಬಿಐ ಡಿಐಜಿ ಶ್ರದ್ಧಾ ರಾವುತ್ ನೇತೃತ್ವದ ಅಧಿಕಾರಿಗಳ ತಂಡ ಕಳೆದ ಏಳು ದಿನಗಳಿಂದ ಡೊಮಿನಿಕಾದಲ್ಲಿ ಉಳಿದಿದ್ದು ಇದೀಗ ಬರಿಗೈಯಲ್ಲಿ ವಾಪಸಾಗಿದ್ದಾರೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ ನಡೆದಿದ್ದ 13,500 ಕೋಟಿ ರೂ.ಗಳ ಹಗರಣವು ಭಾರತೀಯ ಬ್ಯಾಂಕಿಂಗ್ ಉದ್ಯಮವನ್ನು ಬೆಚ್ಚಿಬೀಳಿಸುವ ಮೊದಲು ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪರಾರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com