ಮತಗಟ್ಟೆಗಳಲ್ಲಿ ಲಸಿಕೆ: ದೆಹಲಿಯ ವಿನೂತನ ಲಸಿಕಾ ಅಭಿಯಾನ 

ದೆಹಲಿ ಸರ್ಕಾರ ಮತಗಟ್ಟೆಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಮತಗಟ್ಟೆಗಳಲ್ಲಿ ಲಸಿಕೆ ನೀಡುವುದನ್ನು ಪ್ರಾರಂಭಿಸಿದೆ. 
ಅಜ್ಮೀರ್ ನ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುತ್ತಿರುವ ಮಹಿಳೆ
ಅಜ್ಮೀರ್ ನ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುತ್ತಿರುವ ಮಹಿಳೆ

ನವದೆಹಲಿ: ದೆಹಲಿ ಸರ್ಕಾರ ಮತಗಟ್ಟೆಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಮತಗಟ್ಟೆಗಳಲ್ಲಿ ಲಸಿಕೆ ನೀಡುವುದನ್ನು ಪ್ರಾರಂಭಿಸಿದೆ.  ಎಲ್ಲಿ ಮತವೋ ಅಲ್ಲಿ ಲಸಿಕೆ ಎಂಬ ಶೀರ್ಷಿಕೆಯಡಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

45+ ಮೇಲ್ಪಟ್ಟ ವಯಸ್ಸಿನವರು 57 ಲಕ್ಷ ಮಂದಿ ಇದ್ದಾರೆ, ಈ ಪೈಕಿ 27 ಲಕ್ಷ ಮಂದಿಗೆ ಮೊದಲ ಲಸಿಕೆಯನ್ನು ನೀಡಲಾಗಿದೆ. ಇನ್ನೂ 30 ಲಕ್ಷ ಮಂದಿಗೆ ಲಸಿಕೆ ನೀಡಬೇಕಿದೆ. 45 ವರ್ಷದ ವಯಸ್ಸಿನ ಮಂದಿ ಲಸಿಕೆ ಕೇಂದ್ರಗಳಿಗೆ ಬರದೇ ಇರುವುದನ್ನು ಗಮನಿಸಿದ್ದೇವೆ. ದೆಹಲಿಯಲ್ಲಿ 280 ವಾರ್ಡ್ ಗಳಿವೆ. ಬೂತ್ ಲೆವೆಲ್ ಅಧಿಕಾರಿ (ಬಿಎಲ್ಒ) 

ಮಂಗಳವಾರದಿಂದ 72 ವಾರ್ಡ್ ಗಳಲ್ಲಿ ಮನೆಗಳಿಗೆ ಬಿಎಲ್ಒಗಳು ಭೇಟಿ ನೀಡಿ ಲಸಿಕೆ ಪಡೆಯಲು ಅರ್ಹರಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಮತಗಟ್ಟೆಗಳಿಗೆ ಲಸಿಕೆ ಪಡೆಯುವುದಕ್ಕೆ ಕಳಿಸಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಮತಗಟ್ಟೆಗಳು ಮನೆಗಳ ಬಳಿಯೇ ಇರುವುದರಿಂದ ಜನತೆ ಲಸಿಕೆ ಪಡೆಯುವುದಕ್ಕಾಗಿ ಹೆಚ್ಚಿನ ದೂರ ಪ್ರಯಾಣಿಸಬೇಕಿಲ್ಲ, ಅಗತ್ಯವಿರುವವರಿಗೆ ಮತಗಟ್ಟೆಗಳಿಗೆ ಕರೆದೊಯ್ಯಲು ಇ-ರಿಕ್ಷಾಗಳ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ದೆಹಲಿ ಸರ್ಕಾರ ಹೇಳಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com