ಕೋವಿಡ್ ಸೋಂಕಿತ ಪೋಷಕರ ಆರೈಕೆಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ 15 ದಿನ ವಿಶೇಷ ರಜೆ: ಕೇಂದ್ರ ಸರ್ಕಾರ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಕೊರೋನಾ ಸಾಂಕ್ರಾಮಿಕದ 15 ದಿನ ವಿಶೇಷ ರಜೆ ಘೋಷಣೆ ಮಾಡಿದೆ.

Published: 09th June 2021 08:08 PM  |   Last Updated: 09th June 2021 08:37 PM   |  A+A-


govt employees

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಕೊರೋನಾ ಸಾಂಕ್ರಾಮಿಕದ 15 ದಿನ ವಿಶೇಷ ರಜೆ ಘೋಷಣೆ ಮಾಡಿದೆ.

ಹೌದು.. ಎಲ್ಲಾ ಕೇಂದ್ರ ಸರ್ಕಾರಿ ನೌಕರರು ತಮ್ಮ ಪೋಷಕರು ಅಥವಾ ಯಾವುದೇ ಅವಲಂಬಿತ ಕುಟುಂಬ ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಅವರ ಆರೈಕೆಗಾಗಿ 15 ದಿನಗಳ ವಿಶೇಷ ಸಮಾನ್ಯ ರಜೆ (ಎಸ್‌ಸಿಎಲ್) ಪಡೆಯಬಹುದು ಎಂದು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.  ಅಷ್ಟೇ ಅಲ್ಲದೆ ಈ ವಿಶೇಷ ರಜೆಗಳ 15 ದಿನಗಳ ಅವಧಿ ಮುಕ್ತಾಯದ ಬಳಿಕವೂ ಕೂಡ ಕುಟುಂಬದ ಸೋಂಕಿತ ವ್ಯಕ್ತಿ ಅಥವಾ ಪೋಷಕರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಸಂತ್ರಸ್ಥ ನೌಕರನ ರಜೆಯನ್ನು ವಿಸ್ತರಣೆ ಮಾಡಲು ಅವಕಾಶ ನೀಡಲಾಗಿದೆ.

ಅಂತೆಯೇ ಒಂದು ವೇಳೆ ಸರ್ಕಾರಿ ನೌಕರರಿಗೇ ಸೋಂಕು ದೃಢಪಟ್ಟರೆ ಅಂತಹ ಸಂದರ್ಭದಲ್ಲಿ ಮನೆ ಪ್ರತ್ಯೇಕತೆ ಅಥವಾ ಕ್ವಾರಂಟೈನ್ ನಲ್ಲಿರುವ ಸಂದರ್ಭದಲ್ಲಿ 20 ದಿನಗಳ ವರೆಗೂ ಪ್ರಯಾಣ ರಜೆ ನೀಡಲಾಗುವುದು. ಅಂತೆಯೇ ಹೋಮ್ ಐಸೋಲೇಷನ್ ನಲ್ಲಿರುವಾಗ ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬಂದಾಗ ಅಂತಹ ಸಂದರ್ಭದಲ್ಲಿ ಪರೀಕ್ಷೆ ದೃಢಪಟ್ಟ ದಿನದಿಂದ 20 ದಿನಗಳವರೆಗೂ ರಜೆ ಪಡೆಬಹುದಾಗಿದೆ. ಈ ಅವಧಿಯಲ್ಲೂ ನೌಕರ ಗುಣಮುಖರಾಗದಿದ್ದರೆ ಅಂತಹ ನೌಕರರು ದಾಖಲೆ ನೀಡಿದರೆ 20 ದಿನಗಳಿಗಿಂತಲೂ ಹೆಚ್ಚಿನ ರಜೆ ಪಡೆಯಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಂತೆಯೇ ಕಂಟೈನ್ ಮೆಂಟ್ ಝೋನ್ ಗಳಲ್ಲಿ ವಾಸಿಸುತ್ತಿರುವ ನೌಕರರು ಮತ್ತು ಹೋಮ್ ಐಸೋಲೇಷನ್ ನಲ್ಲಿರುವ ಸಿಬ್ಬಂದಿಗಳು ಬಳಕೆ ಮಾಡಿಕೊಳ್ಳುವ 15 ದಿನಗಳ ರಜೆಯನ್ನು ಕೆಲಸ ಮಾಡಿದ ಅಥವಾ ವರ್ಕ್ ಫ್ರಂ ಹೋಮ್ ಎಂದು ಪರಿಗಣಿಸಬೇಕು ಆದೇಶದಲ್ಲಿ ಸೂಚಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ  ಸಮಯದಲ್ಲಿ ಚಿಕಿತ್ಸೆ, ಆಸ್ಪತ್ರೆಗೆ ದಾಖಲು ಅಥವಾ ಕ್ಯಾರೆಂಟೈನ್ ಅವಧಿಯ ಬಗ್ಗೆ ಸಿಬ್ಬಂದಿ ವಲಯಗಳಿಂದ ಬಂದಿದ್ದ ಹಲವಾರು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಸಚಿವಾಲಯ ಇಂತಹುದೊಂದು ಪ್ರಮುಖ ಆದೇಶ ಹೊರಡಿಸಿದೆ ಎನ್ನಲಾಗಿದೆ. 

ಈ ಆದೇಶವು ಮಾರ್ಚ್ 25, 2020ರಿಂದಲೇ ಜಾರಿಗೆ ಬರುವಂತೆ ನೋಡಿಕೊಳ್ಳಲಾಗಿದ್ದು, ಸರ್ಕಾರದ ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp