'ವೈದ್ಯರು ಭೂಲೋಕದ ದೇವಧೂತರು', ನಾನೂ ಕೂಡ ಶೀಘ್ರದಲ್ಲೇ ಕೋವಿಡ್-19 ಲಸಿಕೆ ಪಡೆಯುತ್ತೇನೆ: ಬಾಬಾ ರಾಮ್ ದೇವ್ ಯೂಟರ್ನ್!

ತಮಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ ಲಸಿಕೆಯ ಅಗತ್ಯವಿಲ್ಲ ಎಂದು ಹೇಳಿ ವೈದ್ಯ ಲೋಕದ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಯೂ ಟರ್ನ್ ಹೊಡೆದಿದ್ದು, 'ವೈದ್ಯರು ಭೂಲೋಕದ ದೇವಧೂತರು, ನಾನೂ ಕೂಡ  ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.

Published: 10th June 2021 09:37 PM  |   Last Updated: 11th June 2021 12:24 PM   |  A+A-


Yoga guru Baba Ramdev

ಯೋಗ ಗುರು ಬಾಬಾ ರಾಮದೇವ್

Posted By : Srinivasamurthy VN
Source : PTI

ನವದೆಹಲಿ: ತಮಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ ಲಸಿಕೆಯ ಅಗತ್ಯವಿಲ್ಲ ಎಂದು ಹೇಳಿ ವೈದ್ಯ ಲೋಕದ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಯೂ ಟರ್ನ್ ಹೊಡೆದಿದ್ದು, 'ವೈದ್ಯರು ಭೂಲೋಕದ ದೇವಧೂತರು, ನಾನೂ ಕೂಡ  ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ವೈದ್ಯರ ವಿರುದ್ಧದ ಹೇಳಿಕೆಯಿಂದಾಗಿ ವೈದ್ಯ ಲೋಕದ ತೀವ್ರ ವಿರೋಧ ಎದುರಿಸುತ್ತಿರುವ ಬಾಬಾ ರಾಮ್ ದೇವ್, ಇದೀಗ ಶೀಘ್ರದಲ್ಲೇ ತಾವು ಕೋವಿಡ್ ಲಸಿಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ವೈದ್ಯರನ್ನು ಭೂಮಿ ಮೇಲಿನ ದೇವದೂತರು ಎಂದು ಶ್ಲಾಘಿಸಿದ್ದಾರೆ. 

ಇದನ್ನೂ ಓದಿ: ಅಲೋಪತಿ ಕುರಿತ ಹೇಳಿಕೆ ಹಿಂಪಡೆಯುವಂತೆ ರಾಮ್ ದೇವ್ ಗೆ ಕೇಂದ್ರ ಸಚಿವ ಹರ್ಷವರ್ಧನ್ ಸೂಚನೆ

ಇದೇ ವೇಳೆ ತಮ್ಮ ವಿರುದ್ಧ ಭುಗಿಲೆದ್ದಿರುವ ವಿವಾದಗಳ ಕುರಿತು ಸ್ಪಷ್ಟನೆ ನೀಡಲು ಯತ್ನಿಸಿದ ಬಾಬಾ ರಾಮ್ ದೇವ್, ನಾನು ಯಾವುದೇ ಸಂಸ್ಥೆಯ ವಿರುದ್ಧ ಅಲ್ಲ. ಉತ್ತಮ ವೈದ್ಯರು ನಮಗೆ ಸಿಕ್ಕ ವರ. ಅವರು ಭೂಮಿ ಮೇಲಿನ ದೇವದೂತರು. ಆದರೆ ಇದೇ ವೈದ್ಯ ಲೋಕದ ಕೆಲವರು ಸ್ವಹಿತಾಸಕ್ತಿ ರಕ್ಷಣೆಗಾಗಿ  ತಪ್ಪುಗಳನ್ನು ಮಾಡುತ್ತಿದ್ದಾರೆ. ಔಷಧದ ಹೆಸರಲ್ಲಿ ಅಮಾಯಕ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಇಂತಹ ವೈದ್ಯರ ವಿರುದ್ಧವೇ ನನ್ನ ಹೋರಾಟ. ಕೆಲ ವೈದ್ಯರು ರೋಗಿಗಳಿಗೆ ದುಬಾರಿ ಔಷಧಿಗಳನ್ನು ಬರೆದುಕೊಡುತ್ತಿದ್ದಾರೆ. ಇದರಿಂದ ಸಾಕಷ್ಟು ರೋಗಿಗಳು ಆರ್ಥಿಕ ಮುಗ್ಗಟ್ಟಿಗೆ ಈಡಾಗುತ್ತಿದ್ದಾರೆ. ಇದೇ ಕಾರಣಕ್ಕೆ  ಪ್ರಧಾನಿ ಮೋದಿ ಅಗ್ಗದ ಔಷಧಿಗಳು ದೊರೆಯುವ ಐತಿಹಾಸಿಕ ಜನೌಷಧ ಕೇಂದ್ರಗಳನ್ನು ಸ್ಥಾಪಿಸಬೇಕಾಯಿತು ಎಂದು ಹೇಳಿದರು.

ತುರ್ತುಸೇವೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಅಲೋಪತಿ ಉತ್ತಮ
ಇದೇ ವೇಳೆ ತುರ್ತುಸೇವೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಅಲೋಪತಿ ಉತ್ತಮ ಎಂದು ಹೇಳಿದ ಬಾಬಾ ರಾಮ್ ದೇವ್, ಯೋಗ, ಆಯುರ್ವೇದ ಜೊತೆಗೇ ಎರಡೂ ಡೋಸ್ ಕೋವಿಡ್ ಲಸಿಕೆಯನ್ನೂ ಹಾಕಿಸಿಕೊಳ್ಳಿ.. ಇದು ನಿಮ್ಮ ದೇಹವನ್ನು ಕೊರೋನಾ ವೈರಸ್ ವಿರುದ್ಧದ ರಕ್ಷಣಾ ಕೋಟೆಯನ್ನಾಗಿ  ಮಾರ್ಪಡಿಸುತ್ತದೆ. ಆಗ ಒಂದೇ ಒಂದು ಸಾವು ಕೂಡ ಕೋವಿಡ್ ವೈರಸ್ ನಿಂದ ಸಂಭವಿಸದು ಎಂದು ಹೇಳಿದರು.  
 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp