ಕೋವಿಡ್ 3ನೇ ಅಲೆ ಸಾಧ್ಯತೆಗಳು ನಿಜ; ದೆಹಲಿ ಸರ್ಕಾರದಿಂದ ಸಮರೋಪಾದಿಯಲ್ಲಿ ಸಿದ್ಧತೆ: ಸಿಎಂ ಕೇಜ್ರಿವಾಲ್

ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಸಾಧ್ಯತೆಗಳು ಹೆಚ್ಚಿದ್ದು, ಅದನ್ನು ನಿಭಾಯಿಸಲು ದೆಹಲಿ ಸರ್ಕಾರ ಯುದ್ಧ ಸನ್ನದ್ಧ ರೀತಿ ತಯಾರಿ ನಡೆದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೇಜ್ರಿವಾಲ್
ಕೇಜ್ರಿವಾಲ್

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಸಾಧ್ಯತೆಗಳು ಹೆಚ್ಚಿದ್ದು, ಅದನ್ನು ನಿಭಾಯಿಸಲು ದೆಹಲಿ ಸರ್ಕಾರ ಯುದ್ಧ ಸನ್ನದ್ಧ ರೀತಿ ತಯಾರಿ ನಡೆದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಬ್ರಿಟನ್ ನಿಂದ ಮೂರನೇ ಅಲೆಯ ಸೂಚನೆಗಳು ಬರುತ್ತಿವೆ. ಶೇಕಡಾ 45ರಷ್ಟು ವ್ಯಾಕ್ಸಿನೇಷನ್ ಹೊರತಾಗಿಯೂ ಪ್ರಕರಣಗಳು ಅಲ್ಲಿ ಹೆಚ್ಚುತ್ತಿವೆ. ಆದ್ದರಿಂದ, ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

ಕೇಜ್ರಿವಾಲ್ ಆನ್‌ಲೈನ್ ಮೂಲಕ ದೆಹಲಿಯಾದ್ಯಂತ ಒಂಬತ್ತು ಆಸ್ಪತ್ರೆಗಳಲ್ಲಿ 22 ಹೊಸ ಪಿಎಸ್‌ಎ ಆಮ್ಲಜನಕ ಘಟಕಗಳನ್ನು ಜಂಟಿಯಾಗಿ ಉದ್ಘಾಟಿಸಿದರು.

ಕೋವಿಡ್ ವಿರುದ್ಧ ಹೋರಾಡಲು ನಮ್ಮ ಸಿದ್ಧತೆಗಳನ್ನು ಬಲಪಡಿಸಲು ದೆಹಲಿಯಾದ್ಯಂತದ ಒಂಬತ್ತು ಆಸ್ಪತ್ರೆಗಳಲ್ಲಿನ ಈ ಹೊಸ ಆಮ್ಲಜನಕ ಘಟಕಗಳನ್ನು ಇಂದು ಸೇರಿಸಲಾಗಿದೆ ಎಂದರು. ನಂತರ ತಮ್ಮ ಭಾಷಣದಲ್ಲಿ 'ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಸಾಧ್ಯತೆಗಳು ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವು ಅದನ್ನು ಎದುರಿಸಲು ಯುದ್ಧದ ಹಾದಿಯಲ್ಲಿ ತಯಾರಿ ನಡೆಸುತ್ತಿದೆ ಎಂದು ಹೇಳಿದರು.

ಮೂರನೇ ಅಲೆಯ ಸಂದರ್ಭದಲ್ಲಿ ಕೋವಿಡ್ ವಿರುದ್ಧ ಹೋರಾಡಲು ವ್ಯವಸ್ಥೆಯನ್ನು ಸಜ್ಜುಗೊಳಿಸಲು ದೆಹಲಿ ಸರ್ಕಾರವು ಆಮ್ಲಜನಕ ಟ್ಯಾಂಕರ್‌ಗಳನ್ನು ಖರೀದಿಸುತ್ತಿದೆ. ಕೋವಿಡ್‌ನ ಎರಡನೇ ಅಲೆಯನ್ನು ದೆಹಲಿಯ ಜನರು ಭುಜಕ್ಕೆ ಭುಜ ಕೊಟ್ಟು ಶಿಸ್ತಿನಿಂದ ಎದುರಿಸುತ್ತಾ ಬಂದಿದ್ದು ಯಶಸ್ವಿಯಾಗಿ ಹೋರಾಡಿದ್ದೇವೆ. ಅಲ್ಲದೆ ಕೈಗಾರಿಕಾ ವಲಯವು ನಮ್ಮ ಜೊತೆಗೂಡಿ ಹೋರಾಡಿದ್ದು ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ಕೋವಿಡ್ ಮೂರನೇ ಅಲೆ ನಮ್ಮನ್ನು ಹೊಡೆಯಬಾರದು ಎಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಅದು ಸಂಭವಿಸಿದಲ್ಲಿ, ದೆಹಲಿ ಮತ್ತೆ ಒಟ್ಟಾಗಿ ಹೋರಾಡಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com