ತಮಿಳುನಾಡು: ವಿಧಾನಸಭೆ ಪ್ರತಿಪಕ್ಷದ ಉಪನಾಯಕನಾಗಿ ಪನೀರ್‌ಸೆಲ್ವಂ ಆಯ್ಕೆ; ಶಶಿಕಲಾಗೆ ಹಿನ್ನೆಡೆ

ಎಐಎಡಿಎಂಕೆ ಸಂಯೋಜಕ ಮತ್ತು ಮಾಜಿ ಮುಖ್ಯಸ್ಥ ಸ್ಥಾನಕ್ಕೆ ಸಚಿವ ಓ ಪನೀರ್ ಸೆಲ್ವ ಅವರು ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಉಪನಾಯಕರಾಗಿ ಸೋಮವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ" 

Published: 15th June 2021 02:19 AM  |   Last Updated: 15th June 2021 12:46 PM   |  A+A-


Jayalalithaa death probe: Panel summons OPS and Health Minister Vijayabaskar

ಒ ಪನ್ನೀರ್ ಸೆಲ್ವಂ

Posted By : Srinivas Rao BV
Source : Online Desk

ಚೆನ್ನೈ: ಎಐಎಡಿಎಂಕೆ ಸಂಯೋಜಕ ಮತ್ತು ಮಾಜಿ ಮುಖ್ಯಸ್ಥ ಸ್ಥಾನಕ್ಕೆ ಸಚಿವ ಓ ಪನೀರ್ ಸೆಲ್ವ ಅವರು ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಉಪನಾಯಕರಾಗಿ ಸೋಮವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ" 

ಅಸೆಂಬ್ಲಿಯಲ್ಲಿ ಪಕ್ಷದ ವಿಪ್ ಮತ್ತು ಉಪ ವಿಪ್ ಆಗಿ ಮಾಜಿ ಸಚಿವ ಎಸ್ ಪಿ ವೇಲುಮಣಿ ಮತ್ತು ಕೆ ರವಿ ಅವರನ್ನು ನೇಮಕ ಮಾಡಲಾಯಿತು.

ಮಾಜಿ ಸಚಿವರಾದ ಕದಂಬೂರ್ ಸಿ ರಾಜು ಮತ್ತು ಕೆ ಪಿ ಅನ್ಬಾಲಗನ್ ಮತ್ತು ಪಿ ಎಚ್ ಮನೋಜ್
ಪಾಂಡಿಯನ್ ಅವರುಗಳನ್ನು ಕ್ರಮವಾಗಿ ಖಜಾಂಚಿ, ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ ಶಶಿಕಲಾ ಅವರಿಗೆ ಇತ್ತ ಪಳನಿ ಸ್ವಾಮಿ ಅವರೂ ತಮ್ಮ ಬಣದ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗುವಂತೆ ನೋಡಿಕೊಂಡಿರರುವ ಬೆಳವಣಿಗೆಯಿಂದ ತೀವ್ರ ಹಿನ್ನಡೆಯುಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp