ವಿಚಿತ್ರ ಆದರೂ ಸತ್ಯ: 5 ನಿಮಿಷಗಳ ಅಂತರದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಲಸಿಕೆ ಪಡೆದ ಬಿಹಾರ ಮಹಿಳೆ!

ಐದು ನಿಮಿಷಗಳ ಅಂತರದಲ್ಲಿ ಮಹಿಳೆಯೊಬ್ಬರಿಗೆ ಎರಡು ಡೋಸ್ ಲಸಿಕೆ ನೀಡಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಐದು ನಿಮಿಷಗಳ ಅಂತರದಲ್ಲಿ ಮಹಿಳೆಯೊಬ್ಬರಿಗೆ ಎರಡು ಡೋಸ್ ಲಸಿಕೆ ನೀಡಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಮಹಿಳೆ ಮೊದಲು ಕೋವಿಶೀಲ್ಡ್ ಪಡೆದಿದ್ದು, ಐದು ನಿಮಿಷಗಳ ನಂತರ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. 

ಬಿಹಾರದ ಗ್ರಾಮವೊಂದರ ರೈತನ ಪತ್ನಿ ಸುನೀಲಾ ದೇವಿ ಅನಕ್ಷರಸ್ಥೆ, ಮನೆಗೆ ಹೋಗಿ ವಿಷಯ ತಿಳಿಸಿದ ನಂತರ ಆಕೆಯ ಸಂಬಂಧಿಕರು ವಾಪಸ್ ಲಸಿಕಾ ಕೇಂದ್ರಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ಮಾಹಿತಿ ನೀಡಿಲ್ಲ. ಆರೋಗ್ಯ ಇಲಾಖೆ ಇಬ್ಬರು ನರ್ಸ್ ಗಳಿಗೆ ಶೋಕಾಸ್ ನೋಟಿಸ್ ನೀಡಿದೆ, ಜೂನ್ 16 ರಂದು ಘಟನೆ ನಡೆದಿದೆ, ಸುನೀಲಾ ದೇವಿ ಅವರನ್ನು ಜೂನ್ 19ರ ವರೆಗೆ ಅಬ್ಸರ್ ವೇಶನ್ ನಲ್ಲಿಡಲು ವೈದ್ಯರು ನಿರ್ಧರಿಸಿದ್ದಾರೆ. ಲಸಿಕೆ ಪಡೆದ ನಂತರ ಮಹಿಳೆ
ನಿಶ್ಯಕ್ತಗೊಂಡಿದ್ದಾರೆ.

ಬೆಲಾರ್‌ಚಕ್ ಮಿಡಲ್ ಸ್ಕೂಲ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಮೊದಲ ಲಸಿಕೆ ತೆಗೆದುಕೊಂಡ ನಂತರ, ಆಕೆಯನ್ನು ಕೋಣೆಯಲ್ಲಿ ಕಾಯುವಂತೆ ಕೇಳಲಾಯಿತು. ಆದರೆ ಏನು ಮಾಡಬೇಕೆಂದು ತೋಚದ ರೈತ ರವೀಂದ್ರ ಮಹತೋ ಅವರ ಪತ್ನಿ ಸ್ವಲ್ಪ ಸಮಯ ಕಾದು. ಕೋವ್ಯಾಕ್ಸಿಲ್ ಲಸಿಕೆ ಪಡೆಯಲು ಕಾಯುತ್ತಿದ್ದ  ಮತ್ತೊಂದು ಸರತಿಯಲ್ಲಿ ಸೇರಿಕೊಂಡಿದ್ದಾರೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದು ತಿಳಿಯಲಿಲ್ಲ, ಒಬ್ಬರು ಬಂದು ನನ್ನನ್ನು ಕರೆದೊಯ್ದರು, ಆ ವೇಳೆ ನಾನು ಲಸಿಕೆ ತೆಗೆದುಕೊಂಡಿರುವುದಾಗಿ ನರ್ಸ್ ಗೆ
ತಿಳಿಸಿದೆ, ಆದರೆ ಅವರು ನನ್ನ ಮಾತು ಕೇಳಿಸಿಕೊಳ್ಳಲಿಲ್ಲ, ಕರೆದುಕೊಂಡು ಹೋಗಿ ಅದೇ ತೋಳಿಗೆ ಮತ್ತೆ ಲಸಿಕೆ ನೀಡಿದರು ಎಂದು ಸುಮಿಲಾ ದೇವಿ ತಿಳಿಸಿದ್ದಾರೆ.

ಲಸಿಕೆ ಪಡೆದ ನಂತರ ಮನೆಗೆ ಹೋಗಿ ತಮ್ಮ ಮಕ್ಕಳಿಗೆ ವಿಷಯ ತಿಳಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ, ನಂತರ ಲಸಿಕಾ ಕೇಂದ್ರಕ್ಕೆ ಬಂದಲ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಗಲಾಟೆ ಮಾಡಿದ್ದಾರೆ. ಆದರೆ ಘಟನೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಈ ಪ್ರಮಾದದ ಬಗ್ಗೆ ಆರೋಗ್ಯ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ, ಘಟನೆಗೆ ಚಂಚಲ ಕುಮಾರಿ ಮತ್ತು ಸುನೀತಾ ಕುಮಾರ್ ಎಂಬ ಇಬ್ಬರು ನರ್ಸ್ ಗಳು ಕಾರಣ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com