ಸಿಂಧಿಯಾಗೆ ಭದ್ರತಾ ಲೋಪ: 14 ಪೊಲೀಸರ ಅಮಾನತು

ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪವೆಸಗಿದ್ದಕ್ಕಾಗಿ ಎರಡು ಜಿಲ್ಲೆಗಳ 14 ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಆಡಳಿತ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ
ಜ್ಯೋತಿರಾಧಿತ್ಯ ಸಿಂಧಿಯಾ

ಭೂಪಾಲ್: ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪವೆಸಗಿದ್ದಕ್ಕಾಗಿ ಎರಡು ಜಿಲ್ಲೆಗಳ 14 ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಆಡಳಿತ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾನುವಾರ ರಾತ್ರಿ ಸಿಂಧಿಯಾ ದೆಹಲಿಯಿಂದ ಬಂದ ನಂತರ ಗ್ವಾಲಿಯರ್ ಗೆ ಹೋಗುತ್ತಿರುವಾಗ ಭದ್ರತಾ ಲೋಪವಾಗಿದೆ. ಸಿಂಧಿಯಾ ಭದ್ರತಾ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಗ್ವಾಲಿಯರ್ ಜಿಲ್ಲೆಯ ಐದು ಮತ್ತು ಮೊರೆನಾ ಜಿಲ್ಲೆಯ 9 ಮಂದಿ ಸೇರಿದಂತೆ ಒಟ್ಟು 14 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಗ್ವಾಲಿಯರ್ ಪೊಲೀಸ್ ಮಹಾನಿರ್ದೇಶಕ ಅಮತ್ ಸಾಂಘಿ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಾಜಿ ಕೇಂದ್ರ ಸಚಿವರನ್ನು ಮಧ್ಯಪ್ರದೇಶ-ರಾಜಸ್ಥಾನ ಗಡಿಯಲ್ಲಿ ಮೊರೆನಾ ಪೊಲೀಸರು ಬೆಂಗಾವಲು ಮಾಡಬೇಕಾಗಿತ್ತು ಮತ್ತು ನಂತರ ಈ ಕಾರ್ಯವನ್ನು ಗ್ವಾಲಿಯರ್ ನ ಪೊಲೀಸರು ಮಾಡಬೇಕಾಗಿತ್ತು. ಆದರೆ, ಸಿಂಧಿಯಾ ಅವರಿಗೆ ಕಾರಿಗೆ ಹೋಲುತ್ತಿದ್ದ ಮತ್ತೊಂದು ಕಾರಿಗೆ ಗ್ವಾಲಿಯರ್ ಪೊಲೀಸರು ಬೆಂಗಾವಲು ಮಾಡಿದ್ದಾರೆ ಎಂದು ಎಸ್ ಪಿ ಹೇಳಿದ್ದಾರೆ. 

ಮೊರೋನಾ ಪೊಲೀಸರು ಗ್ವಾಲಿಯರ್ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳದಿದ್ದರಿಂದ ಸಿಂಧಿಯಾ ಎಸ್ಕಾರ್ಟ್ ಇಲ್ಲದೆ ಗ್ವಾಲಿಯರ್ ಗೆ ಆಗಮಿಸಿದರು. ಈ ಲೋಪಕ್ಕಾಗಿ ಎರಡು ಜಿಲ್ಲೆಗಳಿಗೆ ಸೇರಿದ 14 ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಂಘಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com