ಪಂಜಾಬ್ ಚುನಾವಣೆಗೂ ಮುನ್ನ ಮಾಜಿ ಪೊಲೀಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಎಎಪಿಗೆ ಸೇರ್ಪಡೆ

2015ರ ಕೋಟ್‌ಕಾಪುರ ಪೊಲೀಸ್ ಗುಂಡಿನ ದಾಳಿ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ಭಾಗವಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕುನ್ವರ್ ವಿಜಯ್ ಎಎಪಿ ಪಕ್ಷಕ್ಕೆ ಸೇರ್ಪಡೆ
ಕುನ್ವರ್ ವಿಜಯ್ ಎಎಪಿ ಪಕ್ಷಕ್ಕೆ ಸೇರ್ಪಡೆ

ಅಮೃತಸರ: 2015ರ ಕೋಟ್‌ಕಾಪುರ ಪೊಲೀಸ್ ಗುಂಡಿನ ದಾಳಿ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ಭಾಗವಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಮೃತಸರಕ್ಕೆ ತೆರಳಿದ್ದು, ಪಂಜಾಬ್ ಮಾಜಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ವಿಜಯ್ ಪ್ರತಾಪ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು.

'ಕುನ್ವರ್ ವಿಜಯ್ ಪ್ರತಾಪ್ ಎಎಪಿ ಕುಟುಂಬದ ಭಾಗವಾಗಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಭಗವಂತ್ ಮನ್ ಹೇಳಿದ್ದಾರೆ. 

2029ರಲ್ಲಿ ಕುನ್ವರ್ ವಿಜಯ್ ಪ್ರತಾಪ್ ನಿವೃತ್ತರಾಗಬೇಕಿತ್ತು. ಆದರೆ ಅದಕ್ಕೂ ಮುನ್ನ ರಾಜಿನಾಮೆ ನೀಡಿದ್ದು ಪ್ರತಾಪ್ ಅವರ ರಾಜೀನಾಮೆಯನ್ನು ಸ್ವೀಕರಿಸಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರಂಭದಲ್ಲಿ ನಿರಾಕರಿಸಿದ್ದರು. ಆದರೆ ಮಾಜಿ ಐಜಿ ಶ್ರೇಣಿಯ ಅಧಿಕಾರಿ ತಮ್ಮ ತೀರ್ಮಾನಕ್ಕೆ ಬಲವಾಗಿ ಅಂಟಿಕೊಂಡಿದ್ದರಿಂದ ಮುಖ್ಯಮಂತ್ರಿಗಳು ಅವರ ಅಕಾಲಿಕ ನಿವೃತ್ತಿ ಕೋರಿಕೆಯನ್ನು ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com