2,435 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐ ಬಲೆಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಥಾಪರ್ 

ಕೈಗಾರಿಕೋದ್ಯಮಿ ಗೌತಮ್ ಥಾಪರ್ ಹಾಗೂ ಅವರ ಸಂಸ್ಥೆ ಸಿಜಿ ಪವರ್& ಇಂಡಸ್ಟ್ರಿಯಲ್ ಸೊಲ್ಯೂಷನ್ಸ್ ನ ವಿರುದ್ಧ ಸಿಬಿಐ ಬ್ಯಾಂಕ್ ವಂಚನೆಯ ಪ್ರಕರಣ ದಾಖಲಿಸಿದೆ. 
ಸಿಬಿಐ (ಸಾಂಕೇತಿಕ ಚಿತ್ರ)
ಸಿಬಿಐ (ಸಾಂಕೇತಿಕ ಚಿತ್ರ)

ನವದೆಹಲಿ: ಕೈಗಾರಿಕೋದ್ಯಮಿ ಗೌತಮ್ ಥಾಪರ್ ಹಾಗೂ ಅವರ ಸಂಸ್ಥೆ ಸಿಜಿ ಪವರ್& ಇಂಡಸ್ಟ್ರಿಯಲ್ ಸೊಲ್ಯೂಷನ್ಸ್ ನ ವಿರುದ್ಧ ಸಿಬಿಐ ಬ್ಯಾಂಕ್ ವಂಚನೆಯ ಪ್ರಕರಣ ದಾಖಲಿಸಿದೆ. 

2,435 ಕೋಟಿ ರೂಪಾಯಿಗಳ ಬ್ಯಾಂಕಿಂಗ್ ವಂಚನೆಯ ಪ್ರಕರಣ ಇದಾಗಿದ್ದು, ಎಸ್ ಬಿಐ ನ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಗುರುವಾರದಂದು ಸಿಬಿಐ ಮುಂಬೈ, ದೆಹಲಿ ಗುರುಗ್ರಾಮಗಳಲ್ಲಿ ಆರೋಪಿಗೆ ಸೇರಿದ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. 

ಗೌತಮ್ ಥಾಪರ್ ಅವರ ಸಿಜಿ ಪವರ್ಸ್ ಹಗೂ ಇತರ ಆರೋಪಿಗಳು ಬ್ಯಾಂಕ್ ಹಣವನ್ನು ಬೇರೆಡೆಗೆ ತೊಡಗಿಸಿದ್ದು ಎಸ್ ಬಿಐ ಹಾಗೂ ಇನ್ನಿತರ ಒಕ್ಕೂಟ ಸದಸ್ಯ ಬ್ಯಾಂಕ್ ಗಳಿಗೆ ವಂಚಿಸಿದ್ದಾರೆ ಎಂದು ಎಸ್ ಬಿಐ ಆರೋಪಿಸಿತ್ತು. ಎಸ್ ಬಿಐ ಜೊತೆಗೆ ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಬಾರ್ಕ್ಲೇಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್ ಗಳು ವಂಚನೆಗೆ ಒಳಗಾಗಿವೆ. 

ಗೌತಮ್ ಥಾಪರ್ ನ್ನು ಹೊರತುಪಡಿಸಿ ಸಿಜಿ ಪವರ್ ಹಾಗೂ ಇಂಡಸ್ಟ್ರಿಯಲ್ ಸೊಲ್ಯೂಷನ್ಸ್ ನ ಮಾಜಿ ಸಿಇಒ ಹಾಗೂ ಎಂಡಿ ಕೆ.ಎನ್ ನೀಲಕಂಠ, ಈ ಹಿಂದಿನ ಇಡಿ ಹಾಗೂ ಸಿಎಫ್ಒ ಮಾಧವ್ ಆಚಾರ್ಯ, ಈ ಹಿಂದಿನ ನಿರ್ದೇಶಕ ಬಿ ಹರಿಹರನ್, ಕಾರ್ಯಕಾರಿಯೇತರ ನಿರ್ದೇಶಕ ಓಂಕಾರ್ ಗೋಸ್ವಾಮಿ, ಈ ಹಿಂದಿನ ಸಿಎಫ್ಒ ವೆಂಕಟೇಶ್ ರಾಮಮೂರ್ತಿ ಹಾಗೂ ಇನ್ನಿತರ ಸಾರ್ವಜನಿಕ ಸೇವೆಯಲ್ಲಿದ್ದವರ ಹೆಸರನ್ನು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com