ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಿ: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸೂಚನೆ

ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ಪತ್ತೆಯಾದ ಜಿಲ್ಲೆಗಳಲ್ಲಿ ಗುಂಪು ಸೇರುವುದನ್ನು ತಡೆಗಟ್ಟುವುದು, ವ್ಯಾಪಕ ಪರೀಕ್ಷೆ ಮತ್ತು ಲಸಿಕೆ ವ್ಯಾಪ್ತಿಯನ್ನು ಆದ್ಯತೆಯ ಆಧಾರದ ಮೇಲೆ ಹೆಚ್ಚಿಸುವುದು ಸೇರಿದಂತೆ ತಕ್ಷಣದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಒತ್ತಾಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ಪತ್ತೆಯಾದ ಜಿಲ್ಲೆಗಳಲ್ಲಿ ಗುಂಪು ಸೇರುವುದನ್ನು ತಡೆಗಟ್ಟುವುದು, ವ್ಯಾಪಕ ಪರೀಕ್ಷೆ ಮತ್ತು ಲಸಿಕೆ ವ್ಯಾಪ್ತಿಯನ್ನು ಆದ್ಯತೆಯ ಆಧಾರದ ಮೇಲೆ ಹೆಚ್ಚಿಸುವುದು ಸೇರಿದಂತೆ ತಕ್ಷಣದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಒತ್ತಾಯಿಸಿದೆ.

ಡೆಲ್ಟಾ ರೂಪಾಂತರವು ಮೈಸೂರಿನಲ್ಲಿ ಕಂಡುಬಂದಿರುವುದರಿಂದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಪತ್ರ ಬರೆದಿದ್ದು ನಿಯಂತ್ರಣ ಕ್ರಮಗಳನ್ನು ತತಕ್ಷಣ ಕೈಗೊಳ್ಳುವಂತೆ ಸೂಚಿಸಿದ್ದಾರೆ. 

ಡೆಲ್ಟಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಮಾದರಿಗಳನ್ನು ಇಂಡಿಯನ್‌ ಸಾರ್ಸ್‌-ಕೋವ್‌-2 ಜಿನೋಮಿಕ್ಸ್‌ ಕಾನ್ಸಾರ್ಟಿಯಮ್‌'(​ಐಎನ್‌ಎಸ್‌ಎಸಿಒಜಿ) ಗೊತ್ತುಪಡಿಸಿದ ಪ್ರಯೋಗಾಲಯಗಳಿಗೆ ತ್ವರಿತವಾಗಿ ಕಳುಹಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದುಕೊಳ್ಳಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕರ್ನಾಟಕ ಅಲ್ಲದೆ ಇನ್ನು ಏಳು ರಾಜ್ಯಗಳಿಗೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಐಎನ್‌ಎಸ್‌ಎಸಿಒಜಿ ಪ್ರಕಾರ, ಪ್ರಸ್ತುತ ವೆರಿಯಂಟ್ ಆಫ್ ಕನ್ಸರ್ನ್(ವಿಒಸಿ) ಆಗಿರುವ ಡೆಲ್ಟಾ ಪ್ಲಸ್ ರೂಪಾಂತರವು ಗುಣಲಕ್ಷಣಗಳನ್ನು ಹೊಂದಿದೆ. ವೇಗವಾಗಿ ಪ್ರಸರಣವಾಗುತ್ತದೆ. ಶ್ವಾಸಕೋಶಗಳಿಗೆ ಘಾಸಿ ಮಾಡುತ್ತದೆ. ಇನ್ನು ಇದು ಮೊನೊಕ್ಲೋನಲ್ ಪ್ರತಿಕಾಯ ಮುಂದೆ ಕುಂಠಿತವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com