ಸಚಿನ್ ವಾಜೆ ಬಾರ್ ಮಾಲೀಕರಿಂದ 4.7 ಕೋಟಿ ರೂ. ಸಂಗ್ರಹಿಸಿ ಅನಿಲ್ ದೇಶ್ ಮುಖ್ ಆಪ್ತ ಸಹಾಯಕನಿಗೆ ಹಸ್ತಾಂತರ-ಇಡಿ

ಮುಂಬೈ ಬಾರ್ ಮಾಲೀಕರಿಂದ 4.70 ಕೋಟಿ ಹಣ ಸಂಗ್ರಹಿಸಿ ಅದನ್ನು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಆಪ್ತ ಸಹಾಯಕನಿಗೆ ಹಸ್ತಾಂತರಿಸಿದ್ದಾಗಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೇಳಿರುವುದಾಗಿ ಇಡಿ ಶನಿವಾರ ತಿಳಿಸಿದೆ.
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ

ಮುಂಬೈ: ಮುಂಬೈ ಬಾರ್ ಮಾಲೀಕರಿಂದ 4.70 ಕೋಟಿ ಹಣ ಸಂಗ್ರಹಿಸಿ ಅದನ್ನು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಆಪ್ತ ಸಹಾಯಕನಿಗೆ ಹಸ್ತಾಂತರಿಸಿದ್ದಾಗಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೇಳಿರುವುದಾಗಿ ಇಡಿ ಶನಿವಾರ ತಿಳಿಸಿದೆ.

ಈ ಹಣ ನಂಬರ್ 1, ಅಪರಾಧ ವಿಭಾಗ ಮತ್ತು ಮುಂಬೈ ಪೊಲೀಸ್ ಸಮಾಜ ಸೇವಾ ವಿಭಾಗಕ್ಕೆ ಹೋಗುವುದಾಗಿ ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ಗಳಿಗೆ ಮುಂಬೈ ಅಪರಾಧ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಹೇಳಿರುವುದಾಗಿ ತಿಳಿದುಬಂದಿದೆ. 

ಅನೇಕ ಪೊಲೀಸ್ ತನಿಖೆಗಳಲ್ಲಿ ಅಂದಿನ ಗೃಹ ಸಚಿವರಾಗಿದ್ದ ಅನಿಲ್ ದೇಶ್ ಮುಖ್ ಅವರಿಂದ ನೇರವಾಗಿ ನಿರ್ದೇಶನಗಳನ್ನು ಪಡೆಯುತ್ತಿದ್ದಾಗಿ ಸಚಿನ್ ವಾಜೆ ಹೇಳಿರುವುದಾಗಿ ಸೆಂಟ್ರಲ್ ತನಿಖಾ ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಅನಿಲ್ ದೇಶ್ ಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಾಲಾಂಡೆ ಮತ್ತು ಆಪ್ತ ಸಹಾಯಕ ಕುಂದನ್ ಸಿಂಧೆ ಅವರನ್ನು ಕಸ್ಟಡಿಗೆ ಪಡೆಯಲು ಮುಂಬೈನ ಪಿಎಂಎಲ್ ಎ ನ್ಯಾಯಾಲಯದಲ್ಲಿ  ಸಲ್ಲಿಸಲಾಗಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಈ ಆರೋಪಗಳನ್ನು ಇಡಿ ಮಾಡಿತ್ತು. ಶನಿವಾರ ಅವರನ್ನು ಬಂಧಿಸಲಾಗಿದ್ದು, ಜುಲೈ1 ರವೆರಗೂ ಇಡಿ ಕಸ್ಟಡಿಗೆ ನ್ಯಾಯಾಲಯ ಕಳುಹಿಸಿದೆ. 

ಮಹಾರಾಷ್ಟ್ರ ಗೃಹ ಸಚಿವರ ಅಧಿಕೃತ ನಿವಾಸಕ್ಕೆ ಕರೆಯಿಸಿ, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಪಟ್ಟಿಯನ್ನು ನೀಡಲಾಗಿತ್ತು. ಪ್ರತಿ ಬಾರ್ ಮತ್ತು ರೆಸ್ಟೋರೆಂಟ್‌ನಿಂದ ತಿಂಗಳಿಗೆ 3 ಲಕ್ಷ ರೂ. ಸಂಗ್ರಹಿಸಲು ಸೂಚಿಸಲಾಗಿತ್ತು ಎಂದು ಮಾಜಿ ಪೊಲೀಸ್ ಅಧಿಕಾರಿ ತನ್ನ ಹೇಳಿಕೆಯನ್ನು ಇಡಿಯೊಂದಿಗೆ ದಾಖಲಿಸಿದ್ದಾರೆ.

ಡಿಸೆಂಬರ್ 2020 ರಿಂದ ಫೆಬ್ರವರಿ 2021ರವರೆಗೂ ವಿವಿಧ ಬಾರ್ ಮಾಲೀಕರಿಂದ 4.70 ಲಕ್ಷ ಹಣ ಸಂಗ್ರಹಿಸಿ, ಅನಿಲ್ ದೇಶ್ ಆಪ್ತ ಸಹಾಯಕ ಕುಂದನ್ ಸಿಂಧೆಗೆ  ನೀಡಿದ್ದಾಗಿ ವಾಜೆ ಹೇಳಿರುವುದಾಗಿ ಇಡಿ ತಿಳಿಸಿದೆ.

ನಿರ್ಬಂಧಿತ ಅವಧಿ ಮುಗಿದ ನಂತರವೂ ಕಲಾವಿದರ ಪ್ರದರ್ಶನ ನಿರ್ಬಂಧವಿಲ್ಲದೆ  ಸುಗಮವಾಗಿ ಕಾರ್ಯನಿರ್ವಹಿಸಲು ವಿವಿಧ ಆರ್ಕೇಸ್ಟ್ರಾ ಬಾರ್ ಮಾಲೀಕರು ಮತ್ತು ಮ್ಯಾನೇಜರ್ ಗಳಿಂದ 4.70 ಕೋಟಿ ಸಂಗ್ರಹಿಸಿದ್ದಾಗಿ ವಾಜೆ ಹೇಳಿರುವುದಾಗಿ ಕೇಂದ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com