18 ವರ್ಷ ಮೇಲ್ಪಟ್ಟವರಿಗೂ ಲಸಿಕೆ; 'ಅತೀ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ': ಆಧಾರ್ ಪೂನಾವಾಲ

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಘೋಷಣೆ ಮಾಡಿದ್ದು ಎಲ್ಲ ಜವಾಬ್ದಾರಿ ನನ್ನ ಮೇಲಿದೆ ಎಂದು ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲ ಹೇಳಿದ್ದಾರೆ.

Published: 01st May 2021 08:45 PM  |   Last Updated: 01st May 2021 10:32 PM   |  A+A-


Adar Poonawalla

ಆಧಾರ್ ಪೂನಾವಾಲ

Posted By : Srinivasamurthy VN
Source : The New Indian Express

ನವದೆಹಲಿ: 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಘೋಷಣೆ ಮಾಡಿದ್ದು ಎಲ್ಲ ಜವಾಬ್ದಾರಿ ನನ್ನ ಮೇಲಿದೆ ಎಂದು ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲ ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ ಸೋಂಕು ಏರಿಕೆ ಹಿನ್ನಲೆಯಲ್ಲಿ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುವ ಕುರಿತು ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಲಸಿಕೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಇದೇ ವಿಚಾರವಾಗಿ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲ  ಸುದ್ದಿ ಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಮೇಲೆ ಅತೀವ ಒತ್ತಡವಿದೆ ಎಂದು ಹೇಳಿದ್ದಾರೆ.

ವೈ ಶ್ರೇಣಿಯ ಭದ್ರತೆ ಪಡೆದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿರುವ ಆಧಾರ್ ಪೂನಾವಾಲ, 'ನಾನು ಹೆಚ್ಚುವರಿ ಸಮಯವಾಕಾಶ ಅನುಮತಿ ಮೇರೆಗೆ ಲಂಡನ್ ನಲ್ಲಿದ್ದೇನೆ. ಹಾಲಿ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಹಿಂತಿರುಗಲು ಬಯಸುವುದಿಲ್ಲ. ಪ್ರಸ್ತುತ ಎಲ್ಲವೂ ನನ್ನ ಹೆಗಲ ಮೇಲೆ ನಿಂತಿದೆ. ಆದರೆ  ಇದನ್ನು ನಾನು ಒಬ್ಬನೇ ಮಾಡಲು ಸಾಧ್ಯವಿಲ್ಲ. ಅತೀವ ನಿರೀಕ್ಷೆ ಮತ್ತು ಅಕ್ರಮಣಶೀಲತೆ ನಿಜಕ್ಕೂ ಅಭೂತಪೂರ್ವ. ಲಸಿಕೆ ಪಡೆಯಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಪ್ರಸ್ತುತ ತಾನು ಲಂಡನ್ ನಲ್ಲಿರುವುದು ಕೂಡ ಲಸಿಕೆ ತಯಾರಿಕೆಯನ್ನು ದೇಶದ ಹೊರಗೂ ಅಂದರೆ ಬ್ರಿಟನ್ ಸೇರಿದಂತೆ ಇತರೆ ದೇಶಗಳಿಗೆ  ವಿಸ್ತರಿಸಲು ಎಂದು ಹೇಳಿದ್ದಾರೆ.

ಈ ಬಗ್ಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇವೆ. ಅಂತೆಯೇ ಎಲ್ಲರಿಗೂ ಸಾಧ್ಯವಾದಷ್ಟೂ ನೆರವು ನೀಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಕೋವಿಶೀಲ್ಡ್ ಲಸಿಕೆಯ ದರದ ಕುರಿತು ಮಾತನಾಡಿದ ಅವರು, ಪ್ರಪಂಚದಲ್ಲೇ ಇಂದಿಗೂ ಕೋವಿ ಶೀಲ್ಡ್ ಲಸಿಕೆ ದರ ಅಗ್ಗವಾಗಿದೆ.  ಲಾಭದ ಪ್ರಮಾಣದ ಕುರಿತು ಚಿಂತಿಸದೇ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮವಾದದ್ದನ್ನು ನೀಡಲು ಬಯಸುತ್ತೇವೆ. ನಾವು ತಯಾರಿಸುವ ಲಸಿಕೆಗಳ ಕಾರಣದಿಂದಾಗಿ ನಾನು ಯಾವಾಗಲೂ ಭಾರತ ಮತ್ತು ಜಗತ್ತಿನೊಂದಿಗೆ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಮೂಲಗಳ ಪ್ರಕಾರ ಈ ವರ್ಷದ ಜನವರಿಯಲ್ಲಿ ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಯನ್ನು ಅನುಮೋದಿಸುವ ಹೊತ್ತಿಗೆ, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1.5 ಮಿಲಿಯನ್‌ನಿಂದ 2.5 ಬಿಲಿಯನ್ ಡೋಸ್‌ಗಳಿಗೆ 800 ಮಿಲಿಯನ್ ಡಾಲರ್  ವೆಚ್ಚದಲ್ಲಿ ಹೆಚ್ಚಿಸಿದೆ. 50 ಮಿಲಿಯನ್ ಡೋಸ್‌ ಕೋವಿಶೀಲ್ಡ್ ಲಸಿಕೆಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp