ಕೊರೋನಾ ಸಾಂಕ್ರಾಮಿಕ 2ನೇ ಅಲೆ ತಡೆಯಲು ಆಕ್ರಮಣಕಾರಿ ಲಾಕ್ ಡೌನ್ ಅತ್ಯಗತ್ಯ; ಏಮ್ಸ್ ಮುಖ್ಯಸ್ಥ ಗುಲೇರಿಯಾ

ಕೊರೋನಾ ಸಾಂಕ್ರಾಮಿಕ 2ನೇ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಮಾರ್ಚ್ ನಲ್ಲಿ ವಿಧಿಸಲಾಗಿದ್ದ ಮಾದರಿಯಲ್ಲೇ ಆಕ್ರಮಣಕಾರಿ ಲಾಕ್ಡೌನ್ ಜಾರಿ ಮಾಡಬೇಕು ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಏಮ್ಸ್ ನಿರ್ದೇಶಕ ಡಾ ಗುಲೇರಿಯಾ
ಏಮ್ಸ್ ನಿರ್ದೇಶಕ ಡಾ ಗುಲೇರಿಯಾ

ನವದೆಹಲಿ: ಕೊರೋನಾ ಸಾಂಕ್ರಾಮಿಕ 2ನೇ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಮಾರ್ಚ್ ನಲ್ಲಿ ವಿಧಿಸಲಾಗಿದ್ದ ಮಾದರಿಯಲ್ಲೇ ಆಕ್ರಮಣಕಾರಿ ಲಾಕ್ಡೌನ್ ಜಾರಿ ಮಾಡಬೇಕು ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ದೇಶಾದ್ಯಂತ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿದ್ದು, ಇಂದು ದಾಖಲೆಯ 4 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿದೆ. ಅಂತೆಯೇ ದೇಶಾದ್ಯಂತ ಆಸ್ಪತ್ರೆಯಲ್ಲಿ ಬೆಡ್ ಗಳಿಗಾಗಿ ಮತ್ತು ಆಕ್ಸಿಜನ್ ಸಿಲಿಂಡರ್ ಗಳಿಗಾಗಿ ರೋಗಿಗಳಉ ಪರದಾಡುತ್ತಿದ್ದಾರೆ. ಇತ್ತ ಮೃತ ಸೋಂಕಿತರ ಅಂತ್ಯ  ಸಂಸ್ಕಾರಕ್ಕಾಗಿ ಚಿತಾಗಾರಗಳ ಮುಂದೆಯೂ ಮೃತರ ಕುಟುಂಬಸ್ಥರು ಮತ್ತು ಆ್ಯಂಬುಲೆನ್ಸ್ ಗಳು ಸರತಿ ಸಾಲಲ್ಲಿ ನಿಲ್ಲುತ್ತಿರುವುದು ದೇಶದ ಧಾರುಣ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಇದರ ನಡುವೆಯೇ ಕೊರೋನಾ ಸಾಂಕ್ರಾಮಿಕ 2ನೇ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಮಾರ್ಚ್ ನಲ್ಲಿ ವಿಧಿಸಲಾಗಿದ್ದ ಮಾದರಿಯಲ್ಲೇ ಆಕ್ರಮಣಕಾರಿ ಲಾಕ್ಡೌನ್ ಜಾರಿ ಮಾಡಬೇಕು ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ಭಾರತದ ಆರೋಗ್ಯ ಮೂಲಸೌಕರ್ಯಕ್ಕೆ ಮಿತಿ ಇದೆ, ಹಾಗಾಗಿ ಎರಡನೇ ಕೊರೋನಾ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಮಾರ್ಚ್ ನಲ್ಲಿ ವಿಧಿಸಿದ ಲಾಕ್ ಡೌನ್ ನಂತೆ ಈ ಬಾರಿಯೂ ಆಕ್ರಮಣಕಾರಿ ಲಾಕ್ಡೌನ್ ವಿಧಿಸಬೇಕು. ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಇತರ ರಾಜ್ಯಗಳು  ಜಾರಿಗೊಳಿಸಿದ ರಾತ್ರಿ ಕರ್ಫ್ಯೂಗಳು ಮತ್ತು ವಾರಾಂತ್ಯದ ಲಾಕ್ಡೌನ್ಗಳು ಪರಿಣಾಮಕಾರಿಯಲ್ಲವೆಂದು ಸಾಬೀತಾಗಿದೆ. ಇಲ್ಲಿನ ದೈನಂದಿನ ಸೋಂಕು ಪ್ರಕರಣಗಳ ವರದಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಂತೆಯೇ ಹೆಚ್ಚಿನ ಸೋಂಕು ಪ್ರಕರಣಗಳಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಗಳನ್ನು ಜಾರಿಗೆ ತರಬೇಕು. ಹೆಚ್ಚಾಗುತ್ತಿರುವ ಸೋಂಕು ಪ್ರಮಾಣವನ್ನು ತಗ್ಗಿಸಲು ನಾವು ಆಕ್ರಮಣಕಾರಿಯಾಗಿ ಕೆಲಸ ಮಾಡಬೇಕಾಗಿದೆ. ವಿಶ್ವದ ಯಾವುದೇ ಆರೋಗ್ಯ ವ್ಯವಸ್ಥೆಯು ಈ ರೀತಿಯ ಹೊರೆಗಳನ್ನು ನಿರ್ವಹಿಸಲು  ಸಾಧ್ಯವಿಲ್ಲ. ಆಕ್ರಮಣಕಾರಿ ಲಾಕ್ಡೌನ್ ಅಥವಾ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com