ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವ ಕಾರ್ಯದ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ

ದೇಶದಲ್ಲಿ ಕೋವಿಡ್‍ ನ ಎರಡನೇ ಅಲೆ ವ್ಯಾಪಿಸಿರುವುದು ಮತ್ತು ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವ ಕಾರ್ಯದ ಪ್ರಗತಿಯನ್ನು ಪ್ರಧಾನಿ ನರೇಂದ್ರಮೋದಿ ಭಾನುವಾರ ಪರಿಶೀಲಿಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಕೋವಿಡ್‍ ನ ಎರಡನೇ ಅಲೆ ವ್ಯಾಪಿಸಿರುವುದು ಮತ್ತು ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವ ಕಾರ್ಯದ ಪ್ರಗತಿಯನ್ನು ಪ್ರಧಾನಿ ನರೇಂದ್ರಮೋದಿ ಭಾನುವಾರ ಪರಿಶೀಲಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ನಡುವೆ ವೈದ್ಯಕೀಯ ಆಮ್ಲಜನಕದ ಅಗತ್ಯವನ್ನು ಪರಿಗಣಿಸಿ, ಈಗಿರುವ ಸಾರಜನಕ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳನ್ನಾಗಿ ಪರಿವರ್ತಿಸುವ ಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ಆಮ್ಲಜನಕದ ಉತ್ಪಾದನೆಗೆ ಸಾಧ್ಯವಿರುವ  ವಿವಿಧ ಕೈಗಾರಿಕೆಗಳ ಸಾರಜನಕ ಸ್ಥಾವರಗಳನ್ನು ಗುರುತಿಸಿ, ಆಮ್ಲಜನಕ ಉತ್ಪಾದನೆಗಾಗಿ ಈಗಿರುವ ಪ್ರೆಶರ್ ಸ್ವಿಂಗ್ ಅಬ್ಸಾರ್ಪ್ಷನ್ (ಪಿಎಸ್ಎ) ಸಾರಜನಕ ಸ್ಥಾವರಗಳನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಕೈಗಾರಿಕೆಗಳೊಂದಿಗೆ ಚರ್ಚಿಸಿ, ಈವರೆಗೆ ಈ ಉದ್ದೇಶಕ್ಕಾಗಿ 14 ಕೈಗಾರಿಕೆಗಳನ್ನು ಗುರುತಿಸಲಾಗಿದೆ. ಅಲ್ಲಿನ ಸ್ಥಾವರಗಳ ಪರಿವರ್ತನೆ ಪ್ರಗತಿಯಲ್ಲಿದೆ. ಕೈಗಾರಿಕೆಗಳ ಸಂಘಗಳ ನೆರವಿನಿಂದ ಇನ್ನೂ 37 ಸಾರಜನಕ ಸ್ಥಾವರಗಳನ್ನು ಗುರುತಿಸಲಾಗಿದೆ. ಆಮ್ಲಜನಕದ ಉತ್ಪಾದನೆಗಾಗಿ ಮಾರ್ಪಡಿಸಿದ ಸಾರಜನಕ  ಸ್ಥಾವರವನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಸ್ಥಳಾಂತರ ಸಾಧ್ಯವಾಗದಿದ್ದಲ್ಲಿ ಅಲ್ಲಿಯೇ ಆಮ್ಲಜನಕದ ಉತ್ಪಾದನೆಗೆ ಬಳಸಬಹುದಾಗಿದೆ.

ಸಭೆಯಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com