ವರದಿ ಮಾಡುವುದರಿಂದ ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ: ಚುನಾವಣಾ ಆಯೋಗಕ್ಕೆ 'ಸುಪ್ರೀಂ' ಹೇಳಿಕೆ

ಯಾವುದೇ ನ್ಯಾಯಾಲಯದ ವಿಚಾರಣೆಗಳನ್ನು ವರದಿ ಮಾಡುವುದರಿಂದ ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.

Published: 03rd May 2021 12:06 PM  |   Last Updated: 03rd May 2021 12:06 PM   |  A+A-


Supreme court

ಸುಪ್ರೀಂ ಕೋರ್ಟ್

Posted By : Manjula VN
Source : PTI

ನವದೆಹಲಿ: ಯಾವುದೇ ನ್ಯಾಯಾಲಯದ ವಿಚಾರಣೆಗಳನ್ನು ವರದಿ ಮಾಡುವುದರಿಂದ ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.

ರಾಜ್ಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ರ್ಯಾಲಿಗಳ ಕುರಿತು "ಯಾವುದೇ ಪುರಾವೆಗಳಿಲ್ಲದೆ ಅರೋಪ ಮತ್ತು ಅನಗತ್ಯ ವರದಿ ಮಾಡಲಾಗುತ್ತಿದೆ" ಎಂದು ಚುನಾವಣಾ ಆಯೋಗವು ದೂರು ನೀಡಿತ್ತು. ಈ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಯಾವುದೇ ನ್ಯಾಯಾಲಯದ  ವಿಚಾರಣೆಗಳನ್ನು ವರದಿ ಮಾಡುವುದರಿಂದ ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ ಹೇಳಿದೆ.

'ಮಾಧ್ಯಮ ಶಕ್ತಿಯುತವಾದದ್ದು, ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ನಮ್ಮ ತೀರ್ಪುಗಳು ಮಾತ್ರವಲ್ಲ, ಪ್ರಶ್ನೆಗಳು, ಉತ್ತರಗಳು ಮತ್ತು ಸಂಭಾಷಣೆಗಳನ್ನು ಸಾರ್ವಜನಿಕರ ಕಾಳಜಿ ಮೇರೆಗೆ ವರದಿ ಮಾಡುತ್ತವೆ. ಮಾಧ್ಯಮಗಳು ಅವಲೋಕನಗಳನ್ನು ವರದಿ  ಮಾಡದಿರುವುದು ದೂರದೃಷ್ಟಿಯಾಗಿದೆ" ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಮಾರಣಾಂತಿಕ ಎರಡನೇ ಅಲೆಯ ಮಧ್ಯೆ ಮತದಾನ ನಡೆಸುವ ಬಗ್ಗೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪು "ನಿರ್ದಯ ಮತ್ತು ಅವಹೇಳನಕಾರಿ" ಎಂದು ಚುನಾವಣಾ ಆಯೋಗವು ಕಳೆದ ವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.  

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp