ಕೋವಿಡ್ ಲಸಿಕೆ: ಕೇಂದ್ರ ನೀಡಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿದ ಕೇರಳ; ನರ್ಸ್​ಗಳ ಕಾರ್ಯಕ್ಷಮತೆಗೆ ಖುದ್ಧು ಸಿಎಂ ಫಿದಾ!

ಒಂದೇ ಒಂದು ಹನಿ ಲಸಿಕೆಯನ್ನೂ ವೇಸ್ಟ್ ಮಾಡದೇ ಲಸಿಕೆಗಳನ್ನು ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ನೀಡಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಈ ರಾಜ್ಯದ ನರ್ಸ್ ಗಳ ಕಾರ್ಯ ವೈಖರಿಗೆ ಸ್ವತಃ ಆ ರಾಜ್ಯದ ಸಿಎಂ ಫಿದಾ ಆಗಿದ್ದು, ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ದೇಶಾದ್ಯಂತ ಕೊರೋನಾ ವೈರಸ್ ಲಸಿಕೆಯ ಕೊರತೆ ಮುಂದುವರೆದಿರುವಂತೆಯೇ ಇದೊಂದು ರಾಜ್ಯ ಮಾತ್ರ ಇದಕ್ಕೆ ತದ್ವಿರುದ್ಧವಿದ್ದು, ಒಂದೇ ಒಂದು ಹನಿ ಲಸಿಕೆಯನ್ನೂ ವೇಸ್ಟ್ ಮಾಡದೇ ಲಸಿಕೆಗಳನ್ನು ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ನೀಡಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಈ ರಾಜ್ಯದ ನರ್ಸ್ ಗಳ ಕಾರ್ಯ ವೈಖರಿಗೆ ಸ್ವತಃ ಆ ರಾಜ್ಯದ ಸಿಎಂ ಫಿದಾ ಆಗಿದ್ದು, ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಇಷ್ಟಕ್ಕೂ ಆ ರಾಜ್ಯ ಯಾವುದು... ಕೇರಳ... ಹೌದು.. ನಮ್ಮದೇ ನೆರೆಯ ರಾಜ್ಯ ಕೇರಳದಲ್ಲಿ ಒಂದೇ ಒಂದು ಹನಿ ಕೋವಿಡ್ ಲಸಿಕೆ ವೇಸ್ಟ್ ಆಗಿಲ್ಲ.. ಎಲ್ಲ ಲಸಿಕೆಗಳನ್ನೂ ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ನೀಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ನೀಡಿದ್ದ ಲಸಿಕೆಗಳು ಮಾತ್ರವಲ್ಲದೇ ತಾನು ತರಿಸಿಕೊಂಡಿದ್ದ  ಲಸಿಕೆಯನ್ನೂ ಕೂಡ ಸಮರ್ಪಕವಾಗಿ ವಿತರಣೆ ಮಾಡಿ ಆದರ್ಶಪ್ರಾಯವಾಗಿ ನಿಂತಿದೆ. 

ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ 73,38,806 ಡೋಸ್​ಗಳಷ್ಟು ಕರೊನಾ ಲಸಿಕೆಗಳನ್ನು ನೀಡಿತ್ತು. ಆದರೆ, ಪ್ರತಿಯೊಂದು ಲಸಿಕೆ ವಯಲ್​ಗಳಲ್ಲಿ ವೇಸ್ಟೇಜ್​ ಫ್ಯಾಕ್ಟರ್​ ಆಗಿ ಲಭ್ಯವಿರುವ ಲಸಿಕೆ ಪ್ರಮಾಣವನ್ನು ಬಿಸಾಡುವ ಬದಲು ಇನ್ನಷ್ಟು ಜನರಿಗೆ ಲಸಿಕೆ ನೀಡುವ ಕೆಲಸವನ್ನು ಕೇರಳದ ಆರೋಗ್ಯ ಕಾರ್ಯಕರ್ತರು ಮಾಡಿದ್ದಾರೆ. ಈ ಕಾರಣದಿಂದಾಗಿ ಒಟ್ಟು 74,26,164 ಡೋಸ್​ಗಳನ್ನು ಸಾಧಿಸಲಾಗಿದೆ ಎಂದು ರಾಜ್ಯದ ಸಿಎಂ ಪಿಣರಾಯಿ ವಿಜಯನ್ ಇಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

'ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ನರ್ಸ್​ಗಳು ಸೂಪರ್​ ಎಫಿಷಿಯೆಂಟ್​ ಆಗಿದ್ದಾರೆ. ನಮ್ಮ ಹೃದಯಪೂರ್ವಕ ಪ್ರಶಂಸೆಗೆ ಅವರು ಅರ್ಹರಾಗಿದ್ದಾರೆ' ಎಂದು ವಿಜಯನ್ ಹೇಳಿದ್ದಾರೆ. ಕೇರಳ ಸಿಎಂರ ಈ ಟ್ವೀಟ್ ​ಅನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 'ನಮ್ಮ ಆರೋಗ್ಯ  ಕಾರ್ಯಕರ್ತರು ಲಸಿಕೆ ವೇಸ್ಟೇಜ್​ ಅನ್ನು ಕಡಿಮೆ ಮಾಡುವಲ್ಲಿ ಮಾದರಿಯನ್ನು ಸೃಷ್ಟಿಸಿರುವುದು ಸಂತೋಷ. ಇಂತಹ ಕಾರ್ಯ ಕರೊನಾ ವಿರುದ್ಧದ ಹೋರಾಟವನ್ನು ಸಶಕ್ತಗೊಳಿಸಲು ಬಹುಮುಖ್ಯವಾದುದು' ಎಂದಿದ್ದಾರೆ.

ಅಂದರೆ ಕೇಂದ್ರ ಸರ್ಕಾರ ನೀಡಿದ ಲಸಿಕೆಗಳು ಮಾತ್ರವಲ್ಲದೇ 87,358 ಡೋಸ್ ಕೋವಿಡ್ ಲಸಿಕೆಯನ್ನು ಕೇರಳ ಸರ್ಕಾರ ಹೆಚ್ಚುವರಿಯಾಗಿ ನೀಡಿದೆ. ಆ ಮೂಲಕ ಕೇರಳ ಸರ್ಕಾರ ಕೋವಿಡ್ ಲಸಿಕೆಯ ಒಂದೂ ಹನಿಯನ್ನೂ ವೇಸ್ಟ್ ಮಾಡದೇ ಸಮಪರ್ಕ ಬಳಕೆ ಮಾಡಿದೆ. ಸಾಕಷ್ಟು ರಾಜ್ಯಗಳಲ್ಲಿ ಕೊರೋನಾ  ವೈರಸ್ ಲಸಿಕೆಯ ಕುರಿತು ಮಾತುಕಗಳು ಕೇಳಿಬರುತ್ತಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಲಸಿಕೆಗಳ ಅಸಮರ್ಪಕ ಬಳಕೆಯಿಂದ ಉಂಟಾಗುತ್ತಿರುವ ಲಸಿಕೆಗಳ ವೇಸ್ಟೇಜ್ ಕುರಿತು ಚಿಂತೆಯಲ್ಲಿದೆ. ಕೊರೊನಾ ಲಸಿಕೆಯ ಕೊರತೆಯ ಬಗ್ಗೆ ರಾಜ್ಯ ಸರ್ಕಾರಗಳು ತಲೆಕೆಡಿಸಿಕೊಂಡಿದ್ದರೆ, ಲಸಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ತಾಕೀತು ಮಾಡುತ್ತಿದೆ.  

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇಂದು ಮೇಘಾಲಯ, ನಾಗಾಲ್ಯಾಂಡ್​, ಬಿಹಾರ, ಪಂಜಾಬ್, ದಾದ್ರ ಮತ್ತು ನಗರ್​ಹವೇಲಿ, ಹರಿಯಾಣ, ಮಣಿಪುರ, ಅಸ್ಸಾಂ, ತಮಿಳುನಾಡು, ಲಕ್ಷದ್ವೀಪಗಳು ಶೇ. 4.01 ರಿಂದ ಶೇ. 9.76 ರಷ್ಟು ಲಸಿಕೆ ವೇಸ್ಟೇಜ್ ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com