ಟ್ರಾಫಿಕ್ ರಾಮಸ್ವಾಮಿ
ಟ್ರಾಫಿಕ್ ರಾಮಸ್ವಾಮಿ

ಸಾಮಾಜಿಕ ಹೋರಾಟದ ಮೂಲಕ ಜನಮನ ಗೆದ್ದಿದ್ದ ಟ್ರಾಫಿಕ್ ರಾಮಸ್ವಾಮಿ ಇನ್ನಿಲ್ಲ

ಸರ್ಕಾರದ ತಪ್ಪು ನಿರ್ಧಾರಗಳನ್ನು ಸದಾ ಪ್ರಶ್ನಿಸುತ್ತಿದ್ದ ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ (87) ನಿಧನರಾಗಿದ್ದಾರೆ
Published on

ಚೆನ್ನೈ: ಸರ್ಕಾರದ ತಪ್ಪು ನಿರ್ಧಾರಗಳನ್ನು ಸದಾ ಪ್ರಶ್ನಿಸುತ್ತಿದ್ದ ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ (87) ನಿಧನರಾಗಿದ್ದಾರೆ.

ಹೃದಯಾಘಾತದಿಂದಾಗಿ ಕೆಲ ದಿನಗಳ ಹಿಂದೆ ಚೆನ್ನೈನ  ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು,. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು,  ಅವರಿಗೆ ಕೋವಿಡ್ ನೆಗೆಟಿವ್ ಇತ್ತು , ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಾಮಸ್ವಾಮಿ ಅವರು, ಚೆನ್ನೈ ನ ಸಿಗ್ನಲ್ ಗಳಲ್ಲಿ ನಿಂತು ಟ್ರಾಫಿಕ್ ಜಾಮ್ ನಿರ್ವಹಿಸುತ್ತಿದ್ದರು, ತಮಿಳುನಾಡಿನ ಸಾರಿಗೆ ಸಂಚಾರದಲ್ಲಿ ಜನದಟ್ಟಣೆ ಕಂಡು, ಸ್ವಯಂಪ್ರೇರಣೆಯಿಂದ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಣಕ್ಕೆ ಕಾರಣರಾದರು. ಇವರ ಸಮಾಜಸೇವೆಯನ್ನು ಗುರ್ತಿಸಿದ ಆರಕ್ಷಕ ಇಲಾಖೆ ಇವರಿಗೆ ಟ್ರಾಫಿಕ್
ನಿಯಂತ್ರಣಕ್ಕಾಗಿ ಗುರುತಿನ ಚೀಟಿಯನ್ನು ನೀಡಿದೆ. ಹಾಗಾಗಿ ಇವರ ಹೆಸರು 'ಟ್ರಾಫಿಕ್ ರಾಮಸ್ವಾಮಿ' ಎಂದು ಪ್ರಸಿದ್ಧವಾಯಿತು.

ಇವರು ಮಿಲ್ಲಿನ ಕಾರ್ಮಿಕರಾಗಿದ್ದುಕೊಂಡು, ಭ್ರಷ್ಟಾಚಾರದ ವಿರುದ್ದ, ಅನಧಿಕೃತ ಕಟ್ಟಡಗಳ ತೆರವಿಗೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ದಶಕಗಳಿಂದಲೂ ಸಾಮಾಜಿಕ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಯಾವ ವಕೀಲರ ಸಹಾಯವನ್ನು ತೆಗೆದುಕೊಳ್ಳದೆ, ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸುವಲ್ಲಿಯೂ ಇವರು ಜನಪ್ರಿಯರು. ಸಾಮಾಜಿಕ ಹೋರಾಟದಿಂದ ಅವರು ಕೆಲವು ದುಷ್ಕರ್ಮಿಗಳಿಂದ ಹಲ್ಲೆಗೂ ಒಳಗಾಗಿದ್ದರು. ಮಧುರೆಯಲ್ಲಿ ನಡೆದ ಬಹುಕೋಟಿ ರೂಪಾಯಿ ಗಣಿ ಹಗರಣವನ್ನು ಐ.ಎ.ಎಸ್ ಅಧಿಕಾರಿ ಸಘಾಯಂ ಅವರ ನೇತೃತ್ವದಲ್ಲಿ ತನಿಖೆಯಾಗುವಂತೆ ಮಾಡಿದ್ದಾರೆ.

ರಾಮಸ್ವಾಮಿ ಅವರು ನಡೆಸಿದ ಹೋರಾಟದ ಬಗ್ಗೆ ಭಾರತ ಮಾತ ಫೌಂಡೇಶನ್ ನ ಮು ಆನಂದ್ ಕುಮಾರ್ ಸ್ಮರಿಸಿದ್ದಾರೆ. ರಾಮಸ್ವಾಮಿ ಅವರನ್ನು ನಾನು ಮಧುರೈ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸುವ ವೇಳೆ ಭೇಟಿ ಮಾಡಿದ್ದೆ. ಅದಾದ ನಂತರ ನಮ್ಮ ಸ್ನೇಹ ಗಟ್ಟಿಯಾಗುತ್ತಾ ಹೋಯಿತು.

ನಾನು ಅವರನ್ನು ಭೇಟಿ ಮಾಡಲು ಹೋದಾಲೆಲ್ಲಾ ಪ್ರಶ್ನಿಸುತ್ತಿದ್ದರು, ನನ್ನಂತ ವೃದ್ಧನಿಗಾಗಿ ಏಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿಯ ಅದನ್ನು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಬಳಸು ಎಂದು ಹೇಳುತ್ತಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com