ಮೇ 16 ರಿಂದ 31 ವೇಳೆಗೆ ರಾಜ್ಯಗಳಿಗೆ ಕೇಂದ್ರದಿಂದ 192 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ: ಆರೋಗ್ಯ ಇಲಾಖೆ

ಮೇ 16 ರಿಂದ 31 ವೇಳೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ 192 ಲಕ್ಷ ಡೋಸ್ ಕೋವಿಡ್ ಲಸಿಕೆ ರವಾನೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Published: 14th May 2021 05:31 PM  |   Last Updated: 14th May 2021 05:41 PM   |  A+A-


Covishield vaccine (L) and Covaxin (R)

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್

Posted By : Srinivasamurthy VN
Source : PTI

ನವದೆಹಲಿ: ಮೇ 16 ರಿಂದ 31 ವೇಳೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ 192 ಲಕ್ಷ ಡೋಸ್ ಕೋವಿಡ್ ಲಸಿಕೆ ರವಾನೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 16 ರಿಂದ ಮೇ 31 ರವರೆಗೆ ಒಟ್ಟು 161.99 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ಸರಬರಾಜು ಮಾಡಲಾಗುವುದು. ಈ 191.99 ಲಕ್ಷ ಪ್ರಮಾಣದಲ್ಲಿ  162.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಮತ್ತು 29.49 ಲಕ್ಷ ಡೋಸ್ ಕೋವಾಕ್ಸಿನ್ ಲಸಿಕೆಗಳು ಸೇರಿವೆ. ಅಂತೆಯೇ ಲಸಿಕೆ ಹಂಚಿಕೆ ವಿತರಣಾ ವೇಳಾಪಟ್ಟಿಯನ್ನು ಮುಂಚಿತವಾಗಿ ಹಂಚಿಕೊಳ್ಳಲಾಗುತ್ತದೆ. ನಿಗದಿಪಡಿಸಿದ ಪ್ರಮಾಣಗಳ ತರ್ಕಬದ್ಧ ಮತ್ತು ನ್ಯಾಯಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು  ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕೋರಲಾಗಿದೆ ಎಂದು ಹೇಳಿದೆ.

ಲಸಿಕೆಗಳ ಪರಿಣಾಮಕಾರಿ, ಶೂನ್ಯ ವ್ಯರ್ಥ ಬಳಕೆಯಾಗಿರಲಿ
ಇದೇ ವೇಳೆ ಲಸಿಕೆಗಳ ಪರಿಣಾಮಕಾರಿ ಬಳಕೆ ಮತ್ತು ಶೂನ್ಯ ವ್ಯರ್ಥ ಕುರಿತು ಒತ್ತಿ ಹೇಳಿರುವ ಆರೋಗ್ಯ ಇಲಾಖೆ, ಉಚಿತ ಲಸಿಕೆಗಳ ಪ್ರಮಾಣವನ್ನು 15 ದಿನಗಳ ಮುಂಚಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸುವುದರ ಹಿಂದಿನ ಮೂಲ ಉದ್ದೇಶವೆಂದರೆ ಈ ಉಚಿತ ಲಸಿಕೆ  ಪ್ರಮಾಣಗಳನ್ನು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನ್ಯಾಯಯುತ ಮತ್ತು ಗರಿಷ್ಠ ಬಳಕೆಗಾಗಿ ಅವರು ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಹಿಂದಿನ ಹದಿನೈದು ದಿನಗಳಲ್ಲಿ, ಅಂದರೆ 1 ಮೇ ರಿಂದ  ಮೇ 15, 2021 ಅಂತರದಲ್ಲಿ ಒಟ್ಟು 1.7 ಕೋಟಿಗಿಂತ ಹೆಚ್ಚಿನ ಲಸಿಕೆ ಪ್ರಮಾಣವನ್ನು ಕೇಂದ್ರ ಸರ್ಕಾರವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಮೇ ತಿಂಗಳಲ್ಲಿ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಣೆಗಾಗಿ 4.39 ಕೋಟಿಗೂ ಅಧಿಕ ಡೋಸ್ ಲಸಿಕೆಗಳನ್ನು ಲಭ್ಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದ ಕೋವಿಡ್ ಲಸಿಕೆ ನೀಡಿಕೆ ಅಭಿಯಾನ 118 ದಿನಗಳನ್ನೂ ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ದೇಶಾದ್ಯಂತ 17.93 ಕೋಟಿ ಡೋಸ್ ಲಸಿಕೆಗಳನ್ನು ವಿತರಿಸಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp