ಗುಂಟೂರು ಜೈಲಿನಲ್ಲಿ ನನ್ನ ಪತಿಯ ಹತ್ಯೆಗೆ ಸಂಚು: ವೈಎಸ್ ಆರ್ ಕಾಂಗ್ರೆಸ್ ಸಂಸದನ ಪತ್ನಿ ಆರೋಪ

ಗುಂಟೂರು ಜೈಲಿನಲ್ಲಿ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಬಂಡಾಯ ಸಂಸದ ರಘು ರಾಮ ಕೃಷ್ಣ ರಾಜು ಪತ್ನಿ ರಮಾದೇವಿ ಆರೋಪಿಸಿದ್ದಾರೆ.
ರಘು ರಾಮ ಕೃಷ್ಣ ರಾಜು
ರಘು ರಾಮ ಕೃಷ್ಣ ರಾಜು

ವಿಜಯವಾಡ: ಗುಂಟೂರು ಜೈಲಿನಲ್ಲಿ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಬಂಡಾಯ ಸಂಸದ ರಘು ರಾಮ ಕೃಷ್ಣ ರಾಜು ಪತ್ನಿ ರಮಾದೇವಿ ಆರೋಪಿಸಿದ್ದಾರೆ.

ಗುಂಟೂರು ಜನರಲ್ ಆಸ್ಪತ್ರೆಯಲ್ಲಿ ಹೈಕೋರ್ಟ್ ರಚಿಸಿದ ವೈದ್ಯಕೀಯ ಮಂಡಳಿಯು ತಪಾಸಣೆ ನಡೆಸಿದ ನಂತರ ಸಂಸದರನ್ನು ಜೈಲಿಗೆ ಸ್ಥಳಾಂತರಿಸಿದ ಕೂಡಲೇ ರಮಾದೇವಿ ಈ ಆರೋಪ ಮಾಡಿದ್ದಾರೆ. ಸಿಐಡಿ ಕೋರ್ಟ್ ಆದೇಶದಂತೆ ಸಂಸದ ರಮೇಶ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಜೈಲಿನಲ್ಲಿ ನನ್ನ ಪತಿಯನ್ನು ಕೊಲ್ಲಲು ಅವರು ಸಂಚು ರೂಪಿಸಿದ್ದಾರೆ.  ಈಗಾಗಲೇ ಅವರು ನನ್ನ ಪತಿಗೆ ಏನೇನು ಹಾನಿ ಮಾಡಿದರೋ ಗೊತ್ತಿಲ್ಲ. ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧದ ಮೊಕದ್ದಮೆ ವಾಪಸ್ ಪಡೆುವಂತೆ ಸಿಐಡಿ ಅಧಿಕಾರಿಗಳು ನನ್ನ ಪತಿಗೆ ಥರ್ಡ್ ಡಿಗ್ರಿ  ಟ್ರೀಟ್ ಮೆಂಟ್ ನೀಡುತ್ತಿದ್ದಾರೆ ಎಂದು ರಮಾದೇವಿ ಆಪಾದಿಸಿದ್ದಾರೆ.

ಕಡಪ ಮೂಲದ ಹಲವು ಮಂದಿ ಈಗಾಗಲೇ ಗುಂಟೂರು ಜೈಲಿನಲ್ಲಿ ಇರಿಸಲಾಗಿದ್ದು, ಅವರು ತಮ್ಮ ಪತಿಗೆ ಹಾನಿ ಉಂಟುಮಾಡಬಹುದು ಎಂದು ರಮಾ ದೇವಿ ಆರೋಪಿಸಿದ್ದಾರೆ. ನನ್ನ  ಪತಿಗೆ ಏನಾದರೂ ಅಪಾಯ ಸಂಭವಿಸಿದರೇ ಅದಕ್ಕೆ  ಸಿಐಡಿ ಮುಖ್ಯಸ್ಥ ಪಿ.ವಿ.ಸುನೀಲ್ ಕುಮಾರ್ ಮತ್ತು ಮುಖ್ಯಮಂತ್ರಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದ್ದಾರೆ.

ಅವರು ಭಯೋತ್ಪಾದಕ ಅಥವಾ ಅಪರಾಧಿಯಲ್ಲ,  ಎಲ್ಲಾ ಅಪರಾಧಿಗಳು ನಗರದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ. ನಾವುನ ಪ್ರಜಾಪ್ರಭುತ್ವದಲ್ಲಿದ್ದೇವೆಯೇ? ಇದಕ್ಕೆ ಸಿಎಂ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮತ್ತು ಸಿಐಡಿ ಮುಖ್ಯಸ್ಥರು ಅಪರಾಧಿಗಳು, ಸರ್ಕಾರ ಮತ್ತು ತನಿಖಾ ಎಜೆನ್ಸಿ ಹೈಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

ಶುಕ್ರವಾರ ರಾತ್ರಿ ನನ್ನ ತಂದೆಯನ್ನು ಕಾನೂನು ಬಾಹಿರವಾಗಿ ಅಪಹರಿಸಿದ್ದಾರೆ. ಮತ್ತು ಇಡೀ ರಾತ್ರಿ ನನ್ನ ತಂದೆಗೆ ಕಿರುಕುಳ ನೀಡಿದ್ದಾರೆ ಎಂದು ಸಂಸದರ ಪುತ್ರ ಕನುಮುರಿ ಭರತ್ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com